ಕೇಕ್, ಕುಕ್ಕಿಸ್, ಸ್ಯಾಂಡ್ ವಿಚ್, ಹೀಗೆ ಮಕ್ಕಳಿಗೆ ಇಷ್ಟವಾಗುವ ಪದಾರ್ಥಗಳಿಗೆ ಈ ಚಾಕೋಚಿಪ್ಸ್ ಹಾಕಿಯೇ ಹಾಕುತ್ತೇವೆ. ದೊಡ್ಡವರಿಗೂ ಕೂಡ ಈ ಚಾಕೋಚಿಪ್ಸ್ ಎಂದರೆ ಇಷ್ಟನೇ. ಇದನ್ನು ಹೊರಗಡೆಯಿಂದ ತರುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
ಡಾರ್ಕ್ ಚಾಕೋಲೆಟ್ ಅನ್ನು ಅರ್ಧ ಕಪ್ ಆಗುವಷ್ಟು ಕಟ್ ಮಾಡಿಟ್ಟುಕೊಳ್ಳಿ. ಒಂದು ಬೌಲ್ ಗೆ ಇದನ್ನು ಹಾಕಿ ಮೈಕೋ ಒವೆನ್ ನಲ್ಲಿ 1 ನಿಮಿಷಗಳ ಕಾಲ ಬಿಸಿ ಮಾಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಪೈಪಿಂಗ್ ಬ್ಯಾಗ್ ಗೆ ಈ ಮಿಶ್ರಣವನ್ನು ತುಂಬಿಸಿಕೊಂಡು ಕತ್ತರಿಯ ಸಹಾಯದಿಂದ ಪೈಪಿಂಗ್ ಬ್ಯಾಗ್ ನ ಕೆಳಗೆ ಚಿಕ್ಕ ತೂತು ಮಾಡಿಕೊಳ್ಳಿ.
ನಂತರ ಒಂದು ಪ್ಲಾಸ್ಟಿಕ್ ಕವರ್ ಅನ್ನು ಒಂದು ಚಾಪಿಂಗ್ ಬೋರ್ಡ್ ಮೇಲೆ ಹಾಸಿ ಪೈಪಿಂಗ್ ಬ್ಯಾಗ್ ಸಹಾಯದಿಂದ ಚಾಕೋಲೆಟ್ ಮಿಶ್ರಣವನ್ನು ಚಿಕ್ಕ ಚಿಕ್ಕದ್ದಾಗಿ ಕವರ್ ಮೇಲೆ ಹಾಕಿಕೊಳ್ಳಿ. ನಂತರ ಚಾಪಿಂಗ್ ಬೋರ್ಡ್ ಸಮೇತ ಪ್ಲಾಸ್ಟಿಕ್ ಶೀಟ್ ಅನ್ನು ಫ್ರಿಡ್ಜ್ ನಲ್ಲಿ 15 ನಿಮಿಷಗಳ ಕಾಲ ಇಡಿ ಇದು ಗಟ್ಟಿಯಾಗುತ್ತದೆ. ನಂತರ ನಿಧಾನಕ್ಕೆ ಎಬ್ಬಿಸಿ ತೆಗೆದು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.