ಆಫ್ರಿಕನ್-ಅಮೆರಿಕನ್ ಹಾಲಿವುಡ್ ನಟಿ ಮೇರಿ ಮಿಲ್ಬೆನ್ 74ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಭಾರತೀಯರಿಗೆ ಖುಷಿ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಆನ್ ಲೈನ್ ಕಾಲ್ಪನಿಕ (ವರ್ಚುವಲ್) ವೇದಿಕೆಯೊಂದರಲ್ಲಿ ಭಾರತೀಯ ರಾಷ್ಟ್ರಗೀತೆಯನ್ನು ಶನಿವಾರ ಸುಶ್ರಾವ್ಯವಾಗಿ ಹಾಡಿದ್ದಾರೆ.
“ಭಾರತಕ್ಕೆ ಇಂದು ಅತಿ ಮುಖ್ಯವಾದ ದಿನ. ಇಡೀ ವಿಶ್ವದಲ್ಲಿ ಭಾರತೀಯರು 74ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಭಾರತದ ಅಧ್ಯಕ್ಷ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಯಭಾರಿ ತರನ್ ಜೀತ್ ಸಿಂಗ್ ಸಂಧು ಅವರಿಗೆ ಪ್ರೀತಿಪೂರ್ವಕ ಶುಭಾಶಯ ಕೋರಲು ಬಯಸುತ್ತೇನೆ” ಎಂದು ಮಿಲ್ಬೆನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತ್ರಿವರ್ಣ ಧ್ವಜದ ಫೋಟೋ ಹಾಕಿ ಹೇಳಿದ್ದಾರೆ.
ನುಡ್ಜೆ ಫೋರಮ್ ನಡೆಸುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರಗೀತೆ ಹಾಡಿದ್ದಾರೆ. 38 ವರ್ಷ ವಯಸ್ಸಿನ ಅವರು ಪ್ರತಿಷ್ಠಿತ ಹೆಲೆನ್ ಹಾಲೇಸ್ ಪ್ರಶಸ್ತಿಗೂ ಆಯ್ಕೆಯಾಗಿದ್ದಾರೆ.