ಕೊರೊನಾ ಕಾಲದಲ್ಲಿ ಅನೇಕರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಆದ್ರೆ ಬಹುತೇಕರು ಕೊರೊನಾ ಭಯವಿಲ್ಲದೆ ಸುತ್ತಾಡ್ತಿದ್ದಾರೆ. ಇದ್ರ ಮಧ್ಯೆ ಶ್ರೀಮಂತ ದೇಶ ಅಮೆರಿಕಾದಲ್ಲಿ ಶ್ರೀಮಂತರ ಪಾರ್ಟಿ ಮುಂದುವರೆದಿದೆ.
ಯಸ್, ಅಮೆರಿಕಾದ ಶ್ರೀಮಂತ ಕುಟುಂಬದ ಜೀವನ ಶೈಲಿ ಕೊರೊನಾದಿಂದ ಬದಲಾಗಿಲ್ಲ. ಕೊರೊನಾ ಸಮಯದಲ್ಲೂ ಅವ್ರು ಪಾರ್ಟಿ ಮಾಡ್ತಿದ್ದಾರೆ. ವಿಶೇಷವೆಂದ್ರೆ ಪಾರ್ಟಿಯಲ್ಲಿ 15 ನಿಮಿಷದ ರ್ಯಾಪಿಡ್ ಕೊರೊನಾ ಪರೀಕ್ಷೆ ಕೂಡ ನಡೆಯುತ್ತದೆ.
ಅಲ್ಲಿನ ಶ್ರೀಮಂತ ಜನರಿಗೆ ಕ್ವಾರಂಟೈನ್ ನಲ್ಲಿ ಇರುವುದು ಇಷ್ಟವಿಲ್ಲ. ಕ್ವಾರಂಟೈನ್ ಪ್ರದೇಶಗಳಿಂದ ಅವ್ರು ತಮ್ಮ ಹೆಲಿಕಾಪ್ಟರ್ ಗಳಲ್ಲಿ ಬೇರೆ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗ್ತಿದ್ದಾರೆ. ಅಲ್ಲಿ ಕೊರೊನಾ ಕಾಣಿಸಿಕೊಂಡ್ರೆ ಇನ್ನೊಂದು ಕಡೆ. ಹೀಗೆ ತಮ್ಮ ಜೀವನ ಶೈಲಿಗೆ ಧಕ್ಕೆಯಾಗದಂತೆ ಐಷಾರಾಮಿ ಬದುಕು ನಡೆಸುತ್ತಿದ್ದಾರೆ. ಇಷ್ಟೇ ಅಲ್ಲ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅನೇಕ ಕೋಟ್ಯಾಧಿಪತಿಗಳ ಬೊಕ್ಕಸ ತುಂಬಿದೆಯಂತೆ.