ಉಷ್ಣವಾಯುವಿನ ಬೇಗೆಯಲ್ಲಿ ಬೇಯುತ್ತಿದ್ದ ಕಾರೊಂದರ ಕಿಟಕಿಯನ್ನು ಕೊಡಲಿಯಿಂದ ಒಡೆದು ತೆಗೆದು, ಅದರಲ್ಲಿದ್ದ ನಾಯಿ ಮರಿಯೊಂದನ್ನು ರಕ್ಷಿಸಿದ ವ್ಯಕ್ತಿಯೊಬ್ಬರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಸಮಾಂತಾ ಹೀವರ್ ಎಂಬ ವ್ಯಕ್ತಿ ತಮ್ಮ ಫೇಸ್ಬುಕ್ ಪ್ರೊಫೈಲ್‌ನಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅತ್ಯಂತ ಹೆಚ್ಚಿನ ತಾಪಮಾನದ ದಿನಗಳನ್ನು ನೋಡುತ್ತಿರುವ ಬ್ರಿಟನ್‌ನ ಬರ್ಕ್‌ಶೈರ್‌ನ ನ್ಯೂಬೆರಿ ರೀಟೇಲ್ ಪಾರ್ಕ್‌ನಲ್ಲಿ ಈ ಘಟನೆ ಜರುಗಿದೆ. ನಾಯಿಯನ್ನು ಕಾರಿನಲ್ಲಿ ಬಿಟ್ಟು 45 ನಿಮಿಷಗಳ ಮಟ್ಟಿಗೆ ಅದರ ಮಾಲೀಕರು ಶಾಪಿಂಗ್ ಮಾಡಲು ಹೊರಟಿದ್ದರು.
ಒಳಗಿನ ಬೇಗೆಯಲ್ಲಿ ಉಸಿರಾಡಲು ಪರದಾಡುತ್ತಿದ್ದ ನಾಯಿಯನ್ನು ರಕ್ಷಿಸಲು ಅಲ್ಲಿದ್ದ ಜನರ ಪೈಕಿ ಒಬ್ಬರು ಕೊಡಲಿಯೊಂದನ್ನು ತೆಗೆದುಕೊಂಡು, ಅದರ ಕಿಟಕಿಯನ್ನು ಒಡೆದು ಹಾಕಿದ್ದಾರೆ. ಸತತ ಎಂಟು ಯತ್ನಗಳ ಬಳಿಕ ಕಿಟಕಿಯನ್ನು ಒಡೆದು ಹಾಕಿದ ಅವರು ನಾಯಿಯನ್ನು ಬಿಡುಗಡೆ ಮಾಡುವಲ್ಲಿ ಸಫಲರಾಗಿದ್ದಾರೆ.
https://www.facebook.com/photo.php?fbid=10223667891673429&set=a.3311273268764&type=3