ಹುಟ್ಟುಹಬ್ಬಗಳಿಗೆ ಸರ್ಪ್ರೈಸ್ ಪಡೆಯುವುದು ನಮಗೆ ಬಹಳ ಇಷ್ಟವಾದ ವಿಚಾರಗಳಲ್ಲಿ ಒಂದು. ನಮ್ಮ ಪ್ರೀತಿಪಾತ್ರರರು ಹೀಗೆ ಅಚ್ಚರಿಗಳನ್ನು ಕೊಡುತ್ತಾ ಇರಲಿ ಎಂದು ನಾವು ಯಾವಾಗಲೂ ನಿರೀಕ್ಷೆಯಲ್ಲಿ ಇರುತ್ತೇವೆ.
ಮಲೇಷ್ಯಾದ ಮಹಿಳೆಯೊಬ್ಬರಿಗೆ ಅವರ ಪತಿಯಿಂದ ದೊಡ್ಡ ಅಚ್ಚರಿಯೊಂದು ಬಂದಿದೆ. ಐಯೆನ್ ಸುರಾಯಾ ಹೆಸರಿನ ಇವರು ತಮ್ಮ ಏರ್ ಫ್ರೈಯರ್ ಅನ್ನು ಮೂರು ತಿಂಗಳುಗಳಿಂದ ಬಳಸಿರಲಿಲ್ಲ. ಇತ್ತೀಚೆಗೆ ಅವರು ತಮ್ಮ ಅಡುಗೆ ಮನೆಯ ಅಪ್ಲಾಯನ್ಸ್ ಅನ್ನು ತೆರೆದು ನೋಡಿದಾಗ ಅಚ್ಚರಿ ಕಾದಿತ್ತು.
ಏರ್ ಫ್ರೈಯರ್ ಒಳಗೆ ಮೂರು ತಿಂಗಳ ಹಿಂದೆ ತನ್ನ ಪತಿ ಬಚ್ಚಿಟ್ಟಿದ್ದ ಚಿನ್ನದ ಚೈನ್ ಸುರಾಯಾಗೆ ಸಿಕ್ಕಿತ್ತು. ಏಕೆ ಹೀಗೆ ಮಾಡಿದಿರಿ ಎಂದು ಸುರಾಯಾ ತನ್ನ ಪತಿಗೆ ಕೇಳಿದ ವೇಳೆ, ಅವರಿಗೆ ಅಚ್ಚರಿ ಕಾದಿತ್ತು…!
ತನ್ನ ಮಡದಿಗೆ ಅಚ್ಚರಿ ಮೂಡಿಸಲೆಂದು ಖರೀದಿ ಮಾಡಿ ತಂದಿದ್ದ ನೆಕ್ಲೇಸ್ ಅನ್ನ ಆತ ಹೀಗೆ ಬಚ್ಚಿಡುವ ಮೂಲಕ, ಒಮ್ಮೆಲೆ ಅದನ್ನು ತೆರೆದು ನೋಡಿದ ಕೂಡಲೇ ಆಕೆಯ ಪ್ರತಿಕ್ರಿಯೆ ನೋಡಲು ಬಯಸಿದ್ದರು.
https://www.facebook.com/ad.aien/posts/1401468356715416