ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಇತಿಹಾಸ ಪ್ರೊಫೆಸರ್ ಒಬ್ಬರು ಭವಿಷ್ಯ ನುಡಿದಿದ್ದಾರೆ. ಈ ಪ್ರೊಫೆಸರ್ ಭವಿಷ್ಯಕ್ಕೆ ಅಮೆರಿಕದಲ್ಲಿ ಭಾರಿ ಬೆಲೆ ಇದೆ. ಏಕೆಂದರೆ ಅವರು ಇದುವರೆಗಿನ ಹಲವು ಚುನಾವಣೆಗಳ ಫಲಿತಾಂಶವನ್ನು ನಿಖರವಾಗಿ ಊಹಿಸಿದ್ದರು.
ವಾಷಿಂಗ್ಟನ್‌ನ ಅಮೆರಿಕನ್ ವಿಶ್ವ ವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಅಲ್ಲನ್ ಲಿಕಾಟ್ಮನ್ ಅವರು ಅಧ್ಯಕ್ಷೀಯ ಚುನಾವಣೆಯ ಭವಿಷ್ಯಕಾರ ಎಂದೇ ಪ್ರಸಿದ್ಧರಾಗಿದ್ದಾರೆ. 2016 ರಲ್ಲಿ ಡೆಮೊಕ್ರೆಟ್ ಪಕ್ಷದ ಹಿಲರಿ ಕ್ಲಿಂಟನ್ ವಿರುದ್ಧ ವಿಜಯ ಸಾಧಿಸಿದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ರದ್ದು ಸೇರಿ ಹಿಂದಿನ ಹಲವು ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಭವಿಷ್ಯವನ್ನು ಅವರು ನಿಖರವಾಗಿ ಹೇಳಿದ್ದರು.
ರಿಪಬ್ಲಿಕನ್ ಪಕ್ಷದ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ರ ಕಾಲದಿಂದ ಹಿಡಿದು ಇದುವರೆಗೆ ಅವರು 40 ಚುನಾವಣೆಗಳ ಭವಿಷ್ಯ ನುಡಿದಿದ್ದಾರೆ. ಅತಿ ಕುತೂಹಲ ಕೆರಳಿಸಿದ್ದ ಡೆಮೊಕ್ರೆಟ್ ಪಕ್ಷದ ವಾಲ್ಟರ್ ಮೌಂಡೇಲಾ ಅವರ 1984 ರ ಚುನಾವಣೆಯ ಭವಿಷ್ಯವನ್ನು ಪ್ರೊಫೆಸರ್ ನಿಖರವಾಗಿ ಹೇಳಿದ್ದರು.
ಈ ಬಾರಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಸೋಲುತ್ತಾರೆ. ಡೆಮೊಕ್ರೆಟ್ ಪಕ್ಷದ ಅಭ್ಯರ್ಥಿ, ಮಾಜಿ ಉಪಾಧ್ಯಕ್ಷ ಜೋನ್ ಬಿಡೆನ್ ಗೆಲುವು ಸಾಧಿಸುತ್ತಾರೆ ಎಂದು ಪ್ರೊ. ಅಲ್ಲನ್ ಹೇಳಿದ್ದಾರೆ.