ನವದೆಹಲಿ: ಕೊರೋನಾ ಸೋಂಕಿನ ಕುರಿತಾಗಿ ಆತಂಕದಲ್ಲಿರುವ ಸಾರ್ವಜನಿಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಇನ್ನು ಆತಂಕ ಬೇಕಿಲ್ಲ, ಕೇಂದ್ರ ಸರ್ಕಾರವೇ ಕೊರೋನಾ ಲಸಿಕೆಯನ್ನು ವಿತರಿಸಲು ಮುಂದಾಗಿದೆ.
ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೊರೋನಾ ಲಸಿಕೆ ಖರೀದಿ ಮತ್ತು ವಿತರಣೆ ಮಾಡಲು ಮುಂದಾಗಿದೆ. ಈ ಕುರಿತು ರಚಿಸಲಾದ ಕೇಂದ್ರ ಸರ್ಕಾರದ ಕಾರ್ಯಪಡೆ ಲಸಿಕೆಯನ್ನು ಸರ್ಕಾರದಿಂದಲೇ ಖರೀದಿಸಿ ಎಲ್ಲ ರಾಜ್ಯಗಳಿಗೆ ವಿತರಿಸಲಿದೆ. ಲಸಿಕೆ ವಿತರಣೆಯಲ್ಲಿ ಗೊಂದಲ ಉಂಟಾಗಬಾರದೆಂದು ಸರ್ಕಾರ ಈ ಕ್ರಮ ಕೈಗೊಂಡಿದ್ದು ರಾಜ್ಯಸರ್ಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.
ಆರೋಗ್ಯ ಸಚಿವಾಲಯದ ವತಿಯಿಂದ ಲಸಿಕೆ ಸಂಗ್ರಹಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ನೀತಿ ಆಯೋಗದ ಡಾ.ವಿ.ಕೆ. ಪಾಲ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಈ ಕುರಿತು ಸೂಚನೆ ನೀಡಲಾಗಿದೆ. ಭಾರತದಲ್ಲಿ ಲಸಿಕೆ ವಿವಿಧ ಹಂತದ ಪ್ರಯೋಗಗಳ ಫಲಿತಾಂಶ ಯಶಸ್ವಿಯಾಗಿದ್ದು, ಇವುಗಳ ಬಗ್ಗೆ ಕಾರ್ಯಪಡೆ ನಿಗಾ ವಹಿಸಿದೆ.