alex Certify ಅನಾಥಾಶ್ರಮದಲ್ಲಿ ನಿರಂತರವಾಗಿ ನಡೆದ ಅತ್ಯಾಚಾರಕ್ಕೆ ಬಾಲಕಿ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಾಥಾಶ್ರಮದಲ್ಲಿ ನಿರಂತರವಾಗಿ ನಡೆದ ಅತ್ಯಾಚಾರಕ್ಕೆ ಬಾಲಕಿ ಬಲಿ

ತೆಲಂಗಾಣದಲ್ಲಿ ಕರುಳು ಹಿಂಡುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಅಮೀನ್ಪುರ್ ಅನಾಥಾಶ್ರಮದಲ್ಲಿ 14 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆದಿದೆ. ಅನಾರೋಗ್ಯಕ್ಕೊಳಗಾಗಿದ್ದ ಬಾಲಕಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಐದು ದಿನಗಳ ಹಿಂದೆ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ವೇಳೆ ಆಕೆ 4 ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿದೆ.ಬಾಲಕಿಗೆ ಚಿಕಿತ್ಸೆ ಫಲ ನೀಡದೆ ಸಾವನ್ನಪ್ಪಿದ್ದಾಳೆಂದು ಪೊಲೀಸರು ಹೇಳಿದ್ದಾರೆ.

ಬಾಲಕಿ ಒಂದು ತಿಂಗಳ ಹಿಂದೆ ಅನಾಥಾಶ್ರಮದ ವಾರ್ಡನ್ ವೇಣುಗೋಪಾಲ್ ಹಾಗೂ ಇನ್ನೊಬ್ಬನ ವಿರುದ್ಧ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಮಹಿಳಾ ಸಂಘಟನೆಗಳು ಒತ್ತಾಯಿಸಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...