ಕೊರೊನಾ ವೈರಸ್,ಲಾಕ್ ಡೌನ್ ಕಾರಣದಿಂದಾಗಿ ದೇಶದಲ್ಲಿ ಅನೇಕ ವ್ಯಾಪಾರಸ್ಥರು ನಷ್ಟ ಅನುಭವಿಸಿದ್ದಾರೆ. ಆದ್ರೆ ಕೆಲ ವ್ಯಾಪಾರದಲ್ಲಿ ಅಭಿವೃದ್ಧಿ ಕಂಡು ಬಂದಿದೆ. ಅದ್ರಲ್ಲಿ ಬಿಸ್ಕತ್ತುಗಳ ವ್ಯಾಪಾರ ಕೂಡ ಒಂದು. ಲಾಕ್ ಡೌನ್ ಸಂದರ್ಭದಲ್ಲಿ ಬಿಸ್ಕತ್ತುಗಳಿಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಪಾರ್ಲೇ ಜಿ ಈ ಸಂದರ್ಭದಲ್ಲಿ 82 ವರ್ಷಗಳಿಂದ ಮಾಡಲಾಗದ ದಾಖಲೆ ಮಾಡಿದೆ. ನೀವು ಕೂಡ ಬಿಸ್ಕತ್ ಘಟಕ ಸ್ಥಾಪಿಸಿ ಹಣ ಸಂಪಾದಿಸಬಹುದು.
ಬೇಕರಿ ವ್ಯಾಪಾರಕ್ಕೆ ಮೋದಿ ಸರ್ಕಾರ ಸಹಾಯ ಮಾಡುತ್ತದೆ. ಮುದ್ರಾ ಯೋಜನೆಯಡಿ ವ್ಯವಹಾರ ಪ್ರಾರಂಭಿಸಲು ಕೇವಲ 1 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ಒಟ್ಟು ಖರ್ಚಿನ ಶೇಕಡಾ 80 ರಷ್ಟನ್ನು ಸರ್ಕಾರ ನೀಡುತ್ತದೆ. ಇದಕ್ಕಾಗಿ ಸರ್ಕಾರ ಯೋಜನಾ ವರದಿಯನ್ನು ಸಿದ್ಧಪಡಿಸಿದೆ.
ಅದ್ರ ಪ್ರಕಾರ, ಎಲ್ಲಾ ಖರ್ಚುಗಳನ್ನು ಕಡಿತಗೊಳಿಸಿದ ನಂತರ ಪ್ರತಿ ತಿಂಗಳು 30 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ನೀವು ಗಳಿಸಬಹುದು. ಈ ವ್ಯಾಪಾರ ಶುರು ಮಾಡಲು ಒಟ್ಟು 5.36 ಲಕ್ಷ ರೂಪಾಯಿ ಖರ್ಚು ಬರುತ್ತದೆ.
ನೀವು ಕೇವಲ 1 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಮುದ್ರಾ ಯೋಜನೆ ಸಹಾಯ ನಿಮಗೆ ಸಿಕ್ಕಲ್ಲಿ 2.87 ಲಕ್ಷ ರೂಪಾಯಿಗಳ ಟರ್ಮ್ ಸಾಲ ಮತ್ತು ಬ್ಯಾಂಕಿನಿಂದ 1.49 ಲಕ್ಷ ರೂಪಾಯಿ ಸಾಲ ಸಿಗುತ್ತದೆ. ನೀವು 500 ಚದರ ಅಡಿಗಳಷ್ಟು ಜಾಗವನ್ನು ಹೊಂದಿರಬೇಕು. ಇಲ್ಲವಾದ್ರೆ ಬಾಡಿಗೆ ಪಡೆಯಬೇಕು.ಸರ್ಕಾರ ಎಲ್ಲ ಖರ್ಚು,ವೆಚ್ಚ ಕಳೆದು ನಿಮಗೆ ವಾರ್ಷಿಕ 4.2 ಲಕ್ಷ ರೂಪಾಯಿ ಲಾಭ ಬರುತ್ತದೆಯೆಂದು ಅಂದಾಜಿಸಿದೆ.