
ಬಾಲ್ಯ ವಿವಾಹವಾಗಿ 7 ವರ್ಷಗಳ ನಂತ್ರ ಪತ್ನಿಯನ್ನು ಮನೆಗೆ ಕರೆದಿದ್ದೇ ಪತಿಗೆ ದುಬಾರಿಯಾಗಿ ಪರಿಣಮಿಸಿದೆ. ಮನೆಗೆ ಬರುವಂತೆ ಒತ್ತಾಯ ಮಾಡ್ತಿದ್ದ ಪತಿಯ ಹತ್ಯೆ ಮಾಡಿದ್ದಾಳೆ ಸಲಿಂಗಕಾಮಿ ಪತ್ನಿ. ಪತಿಯನ್ನು ಅಕ್ಕನ ಮನೆಗೆ ಕರೆಸಿದ ಪತ್ನಿ ನಂತ್ರ ಕೃತ್ಯವೆಸಗಿದ್ದಾಳೆ.
ಪುರುಷರನ್ನು ದ್ವೇಷಿಸುವ ಸೀಮಾ, ಪತಿ ಚರಣ್ ಸಿಂಗ್ ನನ್ನು ಮನೆಗೆ ಕರೆದಿದ್ದಾಳೆ. ನಂತ್ರ ಮಾದಕ ದ್ರವ್ಯ ಮತ್ತು ಚುಚ್ಚುಮದ್ದು ನೀಡಿದ್ದಾಳೆ. ಕೈ ಮತ್ತು ಕಾಲುಗಳನ್ನು ವಿದ್ಯುತ್ ಕಟ್ಟರ್ ನಿಂದ ಕತ್ತರಿಸಿ, ಅವುಗಳನ್ನು ಪಾಲಿಥೀನ್ನಲ್ಲಿ ಪ್ಯಾಕ್ ಮಾಡಿ ಒಳಚರಂಡಿಗೆ ಎಸೆದಿದ್ದಾಳೆ. ಈ ಘಟನೆ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ನಡೆದಿದೆ.
ಅನೇಕ ಹುಡುಗಿಯರ ಜೊತೆ ಸಲಿಂಗಕಾಮ ಸಂಬಂಧ ಹೊಂದಿದ್ದ ಸೀಮಾಗೆ ಪತಿ ಮನೆಗೆ ಹೋಗಲು ಇಷ್ಟವಿರಲಿಲ್ಲ.ಪ್ರೀತಿ ನಾಟಕವಾಡಿ ಮನೆಗೆ ಕರೆದಿದ್ದ ಸೀಮಾಗೆ ಆಕೆ ಸಹೋದರಿಯರು ಸಹಾಯ ಮಾಡಿದ್ದರು. ಈಗ ಎಲ್ಲರ ಬಣ್ಣ ಬಯಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.