ಸೆಂಟರ್ವಿಲ್ಲೆ, ಟೆನ್ನೆಸಿ: ಡ್ರೈವಿಂಗ್ ಲೈಸೆನ್ಸ್ ನಲ್ಲಿ ಫೋಟೋ ಇರುವ ಜಾಗದಲ್ಲಿ ಬಂದ ಚಿತ್ರ ನೋಡಿ ಯುವತಿ ಕಂಗಾಲಾಗಿದ್ದಾಳೆ.
ಸೆಂಟರ್ವಿಲ್ಲೆ ಟೆನ್ನೆಸಿಯ ಜೇಡೆ ಡೂಡ್ ಎಂಬಾಕೆ ತನ್ನ ಚಾಲನಾ ಪರವಾನಗಿ ಪತ್ರ ನವೀಕರಣಕ್ಕಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಾರದ ಹಿಂದೆ ನವೀಕರಣವಾಗಿ ಕಾರ್ಡ್ ಬಂದಿದ್ದು, ಆಕೆಯ ಫೋಟೋ ಇರುವ ಜಾಗದಲ್ಲಿ ಖಾಲಿ ಖುರ್ಚಿ ಇದೆ.
ಅದನ್ನು ನೋಡಿ “ನನಗೆ ಈ ಖುರ್ಚಿಯಲ್ಲಿ ಕೂರಿಸಲು ಒಬ್ಬ ಮ್ಯಾನೇಜರ್ ಬೇಕು ಎಂದು ತಮಾಷೆ ಮಾಡಿದ್ದಾರೆ. ಈ ಪ್ರಮಾದದಿಂದ ಆಕೆ ಬೇಸರಮಾಡಿಕೊಳ್ಳದೇ “ಕೊರೊನಾ ವೈರಸ್ ಬೇಸರದಿಂದ ತುಂಬಿದ್ದ ನನ್ನ ಮೂಡ್ ಸರಿ ಮಾಡಿಕೊಳ್ಳಲು ಈ ಘಟನೆ ಅನುಕೂಲವಾಗಿದೆ” ಎಂದು ಹೇಳಿದ್ದಾಳೆ.
“ನನ್ನ ಬಾಸ್ ಕೂಡ ಇದರ ಬಗ್ಗೆ ಹಾಸ್ಯ ಮಾಡಿದ್ದಾರೆ, ಇದು ಎಲ್ಲಕ್ಕಿಂತ ಅತ್ಯಂತ ತಮಾಷೆಯಾಗಿದೆ ಎನ್ನುತ್ತ, ತಮ್ಮ ಎದುರಿದ್ದ ಖುರ್ಚಿಯನ್ನು ತೋರಿಸಿ ಅದು ನೀನಿರಬಹುದು, ನೋಡು ನನ್ನನ್ನು ನೋಡಿ ಕೈ ಬೀಸುತ್ತಿದ್ದೀಯಾ ಎಂದು ತಮಾಷೆ ಮಾಡಿ ನಕ್ಕಿದ್ದರು” ಎಂದು ಡೂಡ್ ಹೇಳಿಕೊಂಡಿದ್ದಾರೆ.
ಟೆನ್ನೆಸಿಯ ಸುರಕ್ಷತೆ ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳು ಇದು ಅಕಸ್ಮಾತ್ತಾಗಿ ಕಣ್ತಪ್ಪಿನಿಂದ ಆದ ಪ್ರಮಾದವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
https://www.facebook.com/jadeisjaded/posts/3898104436882647