alex Certify ಐಷಾರಾಮಿ ಕಾರಿನ ಮೇಲೆ ಮೊಟ್ಟೆಯಿಟ್ಟ ಪಕ್ಷಿಗಾಗಿ ದುಬೈ ದೊರೆ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಷಾರಾಮಿ ಕಾರಿನ ಮೇಲೆ ಮೊಟ್ಟೆಯಿಟ್ಟ ಪಕ್ಷಿಗಾಗಿ ದುಬೈ ದೊರೆ ಮಾಡಿದ್ದೇನು ಗೊತ್ತಾ…?

ದುಬೈ‌ ದೊರೆ ಶೇಖ್‌ ಹಮ್ದಾನ್ ಬಿನ್ ಮೊಹಮ್ಮದ್‌ ಬಿನ್ ರಶೀದ್ ಅಲ್ ಮಕ್ತೌಮ್‌ ತಮ್ಮ ಹೆಸರಿನಷ್ಟೇ ವಿಶಾಲವಾದ ಹೃದಯವನ್ನು ತೋರುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ.

ತಮ್ಮ ಮರ್ಸಿಡಿಸ್-AMG G63 SUV ಮೇಲೆ ಮೊಟ್ಟೆಯಿಟ್ಟಿದ್ದ ಪಕ್ಷಿಯೊಂದರ ನೆರವಿಗೆ ನಿಂತ ಶೇಖ್‌ ಹಮ್ದಾನ್, ಪಾರ್ಕಿಂಗ್ ಲಾಟ್‌‌ ನಲ್ಲಿ ನಿಂತಿದ್ದ ತಮ್ಮ ಕಾರಿನ ಸುತ್ತಲಿನ ಜಾಗವನ್ನು ನಿರ್ಬಂಧಿತ ಪ್ರದೇಶವನ್ನಾಗಿಸುವ ಮೂಲಕ ಪಕ್ಷಿಯು ತನ್ನ ಗೂಡಿನಲ್ಲಿ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡಲು ನೆರವಾಗಿದ್ದಾರೆ. ಹಮ್ದಾನ್‌ ಪ್ರಕೃತಿ ಪ್ರಿಯ ಎಂದು ಹೆಸರಾಗಿದ್ದಾರೆ.

ತಮ್ಮ ಹೌಸ್ ‌ಕೀಪಿಂಗ್ ಹಾಗೂ ಗ್ಯಾರೇಜ್ ಸಿಬ್ಬಂದಿಯನ್ನು ಕಾರು ನಿಲ್ಲಿಸಿರುವ ಆ ಜಾಗಕ್ಕೆ ಬರದಂತೆ ಶೇಖ್‌ ಕೋರಿಕೊಂಡಿದ್ದರು.

https://www.instagram.com/tv/CDyiYDxpPKb/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...