ಶಿವಮೊಗ್ಗ: 2020-21 ನೇ ಸಾಲಿನಲ್ಲಿ ಅಲೆಮಾರಿ/ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಅಲೆಮಾರಿ ಅಭಿವೃದ್ಧಿ ಕೋಶವು ಸ್ವಯಂ ಉದ್ಯೋಗ ಯೋಜನೆ, ಮೈಕ್ರೋ ಕ್ರೆಡಿಟ್ ಮತ್ತು ಸ್ವಯಂ ಉದ್ಯೋಗ- ಉದ್ಯಮಶೀಲತಾ ಯೋಜನೆಯಡಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ ಸೌಲಭ್ಯ ಪಡೆಯಲು ಆಸಕ್ತರು ಕೋಶದ ವೆಬ್ಸೈಟ್ http://adcl.karnataka.gov.in ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ದಾಖಲೆಗಳೊಂದಿಗೆ ಕಚೇರಿಯಲ್ಲಿ ಆಗಸ್ಟ್-31 ರೊಳಗಾಗಿ ಸಲ್ಲಿಸುವಂತೆ ಕೋಶದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ರಂಗನಾಥ ನಿಲಯ, ಗಾಂಧಿನಗರ 6ನೇ ತಿರುವು, ‘ಎ’ ಬ್ಲಾಕ್, ಶಿವಮೊಗ್ಗ ಅಥವಾ ದೂ.ಸಂ.: 08182-224349 ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ.