ಕೊನೆಗೂ ಕೊರೊನಾ ಲಸಿಕೆ ಬಂದಿದೆ. ರಷ್ಯಾ ಈ ಲಸಿಕೆ ತಯಾರಿಸಿದೆ. ಈ ಲಸಿಕೆಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ತಯಾರಕ ಕಂಪನಿ ಅಸ್ಟ್ರಾಜೆನೆಕಾ ತಯಾರಿಸಿದೆ. ಈ ಲಸಿಕೆ ತಯಾರಿಸಲು ರಷ್ಯಾ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಹಣ ಸಹಾಯ ಮಾಡುತ್ತಿದೆ. ಈಗ ರಷ್ಯಾದ ಆರ್‌ಡಿಐಎಫ್ ಕೊರೊನಾ ಲಸಿಕೆ ಬಗ್ಗೆ ವೆಬ್ ಸೈಟ್ ಪ್ರಾರಂಭಿಸಿದೆ.
ಕೊರೊನಾ ಲಸಿಕೆಗೆ ಸ್ಪುಟ್ನಿಕ್ ವಿ ಎಂದು ಹೆಸರಿಡಲಾಗಿದೆ. ಆರ್‌ಡಿಐಎಫ್ ಪ್ರಾರಂಭಿಸಿದ ವೆಬ್‌ಸೈಟ್‌ಗೆ sputnikvaccine.com ಎಂದು ಹೆಸರಿಡಲಾಗಿದೆ. ಭಾರತದ ರಷ್ಯಾ ರಾಯಭಾರ ಕಚೇರಿ ಈ ಮಾಹಿತಿಯನ್ನು ತನ್ನ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದೆ.
ಈ ವೆಬ್ಸೈಟ್ ನಲ್ಲಿ ಕೊರೊನಾ ಲಸಿಕೆ ಸ್ಪುಟ್ನಿಕ್ ವಿ ಬಗ್ಗೆ ಎಲ್ಲ ಮಾಹಿತಿ ಇದೆ. ಲಸಿಕೆ ತಯಾರಿಕೆಗೆ ಯಾರ ಸಹಭಾಗಿತ್ವವಿದೆ ಎಂಬುದನ್ನು ಹೇಳಲಾಗಿದೆ. ಮಾಧ್ಯಮಗಳಿಗಾಗಿ ಮೀಡಿಯಾ ಪೇಜ್ ಕೂಡ ಇದೆ. ಸಂಪರ್ಕಿಸುವ ಮಾಹಿತಿ ಕೂಡ ನೀಡಲಾಗಿದೆ. ಪ್ರಶ್ನೋತ್ತರಕ್ಕೂ ಒಂದು ಕಾಲಂ ನೀಡಲಾಗಿದೆ. ನಿರಂತರ ಸಂಶೋಧನೆಯ ಫಲಿತಾಂಶ ಈ ಲಸಿಕೆ ಎಂದು ರಷ್ಯಾ ಹೇಳಿಕೊಂಡಿದೆ.