ಅಡುಗೆ ಸೋಡಾ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು. ಇದರಿಂದ ಡಿಯೋಡರೆಂಟ್, ಫೇಸ್ ಕ್ಲೆನ್ಸರ್ ಇತ್ಯಾದಿಗಳನ್ನು ತಯಾರಿಸಬಹುದು. ಹೇಗೆಂದಿರಾ…?
ಸ್ವಲ್ಪ ಅಡುಗೆ ಸೋಡಾಕ್ಕೆ ತುಸುವೇ ನೀರು ಚಿಮುಕಿಸಿ ನಿಮ್ಮ ತೋಳಿನ ಅಡಿಭಾಗಕ್ಕೆ ಅಂದರೆ ಕಂಕುಳಿಗೆ ತಿಕ್ಕುವುದರಿಂದ ಆ ಭಾಗ ಕಪ್ಪಾಗಿದ್ದರೆ ಸ್ವಚ್ಛವಾಗುತ್ತದೆ ಹಾಗೂ ದಿನವಿಡೀ ದುರ್ವಾಸನೆ ಬೀರುವುದು ಕಡಿಮೆಯಾಗುತ್ತದೆ.
ಸ್ನಾನ ಮಾಡುವ ನೀರಿಗೆ ಎರಡು ಚಮಚ ಅಡುಗೆ ಸೋಡಾ ಹಾಗೂ ಒಂದು ಚಮಚ ಎಣ್ಣೆ ಸೇರಿಸಿ ಸ್ನಾನ ಮಾಡಿ. ಇದರಿಂದ ತ್ವಚೆ ಹೊಳೆಯುತ್ತದೆ. ದೇಹದಿಂದ ವಾಸನೆ ಹೊರಹೊಮ್ಮುವುದು ಕಡಿಮೆಯಾಗುತ್ತದೆ. ಒಣಚರ್ಮ ಸಮಸ್ಯೆ ಇದ್ದರೆ ನಿವಾರಣೆ ಆಗುತ್ತದೆ.
ಅಡುಗೆ ಸೋಡಾ ಅದೇ ಪ್ರಮಾಣದ ನೀರು ಬೆರೆಸಿ ಸ್ಕ್ರಬ್ ರೂಪದಲ್ಲಿ ದೇಹದ ಹೊರಭಾಗಕ್ಕೆ ತಿಕ್ಕುವುದರಿಂದ ಡೆಡ್ ಸ್ಕಿನ್ ನಿರ್ಮೂಲನೆಗೊಳ್ಳುತ್ತದೆ. ನಿಮ್ಮ ಕೈಗಳು ಮೃದುವಾಗುತ್ತವೆ. ಇದನ್ನು ಮೊಡವೆಗೆ ಹಚ್ಚಿದರೆ ಮೊಡವೆ ಅಲ್ಲಿಯೇ ಸಣ್ಣದಾಗಿ ಹೋಗುತ್ತದೆ. ಇದನ್ನು ಫೇಸ್ ವಾಶ್ ರೂಪದಲ್ಲಿಯೂ ಬಳಸಿ ಕಾಂತಿಯುತ ಮುಖ ನಿಮ್ಮದಾಗಿಸಿಕೊಳ್ಳಬಹುದು.