ಕೇವಲ ಐದು ತಿಂಗಳ ಹಿಂದೆ ತನ್ನ ಮಗ ವ್ಯಾಸಂಗ ಮಾಡುತ್ತಿದ್ದ CBSE ಶಾಲೆಯೊಂದರಲ್ಲಿಯೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಶಿರಜ್ ನಿಶಾ, ಕೊರೊನಾ ಕಾರಣದಿಂದಾಗಿ ತಮ್ಮ ಜೀವನೋಪಾಯವಾಗಿದ್ದ ಉದ್ಯೋಗವನ್ನೇ ಕಳೆದುಕೊಳ್ಳುವಂತೆ ಮಾಡಿದೆ.
ಇದರ ಜೊತೆಗೆ ತಾವಿದ್ದ ಮನೆಯ ಬಾಡಿಗೆ ಕಟ್ಟದೇ ಇದ್ದ ಕಾರಣದಿಂದ ಮನೆಯನ್ನು ಖಾಲಿ ಮಾಡಲು ಅದರ ಮಾಲೀಕರು ಆಗ್ರಹಿಸಿದ ಕಾರಣ ನಿಶಾಗೆ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಜೊತೆಗೆ ತಾನೇ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಓದುತ್ತಿದ್ದ ಕಾರಣ ಆಕೆಯ ಮಗನ ಶುಲ್ಕದಲ್ಲಿ 50%ನಷ್ಟು ವಿನಾಯಿತಿ ಸಹ ಸಿಕ್ಕಿತ್ತು. ಆದರೆ, ಕಳೆದ ಡಿಸೆಂಬರ್‌ನಿಂದ ಶಾಲಾ ಆಡಳಿತವು ತನ್ನ ಸಿಬ್ಬಂದಿ ಮಕ್ಕಳ ವ್ಯಾಸಾಂಗದ ಮೇಲೆ ಇದ್ದ ಶುಲ್ಕ ವಿನಾಯಿತಿ ಹಿಂಪಡೆದುಕೊಂಡುಬಿಟ್ಟಿದೆ.
ಹೀಗೆ ಕೋವಿಡ್-19 ಲಾಕ್‌ಡೌನ್‌ನಿಂದ ಕಷ್ಟದ ಮೇಲೆ ಕಷ್ಟದ ಸರಮಾಲೆಯನ್ನೇ ಎದುರಿಸುತ್ತಾ ಬಂದಿರುವ ನಿಶಾ, ತನ್ನ ಹೆತ್ತವರ ಮನೆಯಲ್ಲಿ ಸೇರಿಕೊಳ್ಳಬೇಕಾಗಿ ಬಂದಿದ್ದು, ಅವರು ಉಳಿತಾಯ ಮಾಡಿರುವ ಅಷ್ಟೋ ಇಷ್ಟೋ ಹಣದಲ್ಲಿ ದಿನಗಳನ್ನು ತಳ್ಳುವಂತಾಗಿದೆ. ಕೋವಿಡ್ ಕಾಟದಿಂದ ತಲ್ಲಣಗೊಂಡಿರುವ ಅದೆಷ್ಟೋ ಕುಟುಂಬಗಳಲ್ಲಿ ಇದೂ ಒಂದಾಗಿದೆ.