ಗೂಗಲ್ ನೀಡುವ ಜಿ-ಮೇಲ್ ಸೇವೆಯಿಂದ ಅನೇಕ ಉಪಯೋಗವಿದೆ. ಅನೇಕರು ಕಚೇರಿ ಕೆಲಸಕ್ಕೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಗೂಗಲ್, ಬಳಕೆದಾರರಿಗೆ 15 ಜಿಬಿವರೆಗೆ ಸ್ಪೇಸ್ ನೀಡುತ್ತದೆ. ಕೆಲವರಿಗೆ ಇದು ಸಾಕಾಗುವುದಿಲ್ಲ.
ಜಾಗವಿಲ್ಲದೆ ಹೊಸ ಮೇಲ್ ಗಳು ಖಾತೆಗೆ ಬರುವುದಿಲ್ಲ. ಹಾಗಿರುವಾಗ ಬೇಡದ, ಅನವಶ್ಯಕ ಮೇಲ್ ಗಳನ್ನು ಡಿಲೀಟ್ ಮಾಡಿ. ಅನೇಕ ಜಾಹೀರಾತು ಕಂಪನಿಗಳು ಮೇಲ್ ಮಾಡ್ತಿರುತ್ತವೆ. ಅದನ್ನು ಡಿಲೀಟ್ ಮಾಡಿ. ಅನ್ ಸಬ್ಸ್ಕ್ರೈಬ್ ಮಾಡಿದ್ರೆ ಮೇಲ್ ಬರುವುದಿಲ್ಲ.
ಮೇಲ್ ಜೊತೆ ಅಟ್ಯಾಚ್ಮೆಂಟ್ ಬಂದಿರುತ್ತದೆ. ಇದು ನಿಮ್ಮ ಜಿ-ಮೇಲ್ ಸ್ಪೇಸ್ ನುಂಗಿ ಹಾಕುತ್ತದೆ. ಅವಶ್ಯಕವಲ್ಲದ್ದನ್ನು ಡಿಲೀಟ್ ಮಾಡಿ. ಇದ್ರಿಂದ ಹೆಚ್ಚಿನ ಸ್ಪೇಸ್ ನಿಮಗೆ ಸಿಗುತ್ತದೆ. ಸರ್ಚ್ ಗೆ ಹೋಗಿ 5 ಎಂ ಸರ್ಚ್ ಮಾಡಿ. 5 ಎಂಬಿಗಿಂತ ಹೆಚ್ಚಿರುವ ಅಟ್ಯಾಚ್ಮೆಂಟ್ ಮೇಲ್ ಗಳ ಲೀಸ್ಟ್ ಕಾಣಿಸುತ್ತದೆ. ಬೇಡದ ಮೇಲ್ ಗಳನ್ನು ಡಿಲೀಟ್ ಮಾಡಿ.
ಹಳೆ ಮೇಲ್ ಗಳನ್ನು ನಾವು ಡಿಲೀಟ್ ಮಾಡಲು ಹೋಗಿರುವುದಿಲ್ಲ. ಇದರಿಂದ ಸ್ಪೇಸ್ ಸಮಸ್ಯೆ ಕಾಡುತ್ತದೆ. ಹಾಗಾಗಿ ಹಳೆಯ, ಅವಶ್ಯಕವಲ್ಲದ ಮೇಲ್ ಗಳನ್ನು ಡಿಲೀಟ್ ಮಾಡಿ ಸ್ಪೇಸ್ ಉಳಿಸಿ.