ಹಾವಿನ ಕಲಾಕೃತಿಗಳು ಇರುವ ವಸ್ತ್ರಗಳು ಬಹಳ ಕಾಮನ್ ಎನ್ನುವ ಮಟ್ಟದ ಟ್ರೆಂಡ್. ಬ್ಯಾಗ್‌ಗಳಿಂದ ಹಿಡಿದು, ಸ್ಕಾರ್ಫ್, ಶೂಗಳು ಹಾಗೂ ಮಫ್ಲರ್ ಗಳವರೆಗೂ ಪ್ರತಿಯೊಂದು ವಸ್ತುವಿನ ಮೇಲೂ ಸ್ನೇಕ್ ಪ್ರಿಂಟ್ ಇರುವುದನ್ನು ಈಗಿನ ದಿನಗಳಲ್ಲಿ ಸಾಕಷ್ಟು ನೋಡಬಹುದಾಗಿದೆ.
ಫ್ಲಾರಿಡಾದಲ್ಲಿ ಮಹಿಳೆಯೊಬ್ಬರು ಇಂಥದ್ದೇ ಸ್ನೇಕ್ ಪ್ರಿಂಟ್ ಎಂದು ಭಾವಿಸಿ ಬೆಚ್ಚಿ ಬಿದ್ದಿರುವ ಘಟನೆ ಜರುಗಿದೆ. ಎಮಿಲಿ ವಿಸ್ನಿಕ್ ಹೆಸರಿನ ಈ ಮಹಿಳೆ ಇಲ್ಲಿನ ವೆಸ್ಟ್ ಪಾಮ್ ಬೀಚ್‌ನಲ್ಲಿ ವಾಸಿಸುತ್ತಾರೆ. ತಮ್ಮ ಬಟ್ಟೆಗಳನ್ನು ವಾಶಿಂಗ್ ಮಷೀನ್‌ಗೆ ಹಾಕಲೆಂದು ಮುಂದಾದ ವೇಳೆ ಅಸಹಜ ದೃಶ್ಯವೊಂದು ಕಣ್ಣಿಗೆ ಬಿದ್ದಿದೆ. ನೋಡಿದ ಕೂಡಲೇ ಅದನ್ನು ಸ್ನೇಕ್ ಗಾರ್ಮೆಂಟ್ ಎಂದುಕೊಂಡ ಆಕೆಗೆ ಆಮೇಲೆ ಅದು ನಿಜವಾದ ಹೆಬ್ಬಾವು ಎಂದು ಅರಿವಾಗಿದೆ.
ಕೊನೆಗೆ ತನ್ನ ಅಪಾರ್ಟ್‌ಮೆಂಟ್‌ನ ಮೇಂಟೇನೆನ್ಸ್ ಸಿಬ್ಬಂದಿಗೆ ವಿಚಾರ ಮುಟ್ಟಿಸಿದ ಎಮಿಲಿ, ಆ ಹೆಬ್ಬಾವನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ. ಆ ಹಾವು ಅಲ್ಲಿಗೆ ಹೇಗೆ ಬಂತು ಎಂದು ಆಕೆಗೆ ತಿಳಿದಿಲ್ಲ.