alex Certify ತುಟಿಗಳ ಚಲನೆ ಅರಿಯಲು ಬಂತು ಪಾರದರ್ಶಕ ಮಾಸ್ಕ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಟಿಗಳ ಚಲನೆ ಅರಿಯಲು ಬಂತು ಪಾರದರ್ಶಕ ಮಾಸ್ಕ್‌

ಸದ್ಯದ ಸ್ಥಿತಿಗತಿಯಲ್ಲಿ ಬಹು ಮುಖ್ಯವಾದ ಅಕ್ಸೆಸರಿ ಎಂದರೆ ಮುಖದ ಮಾಸ್ಕ್‌. ಈ ಮಾಸ್ಕ್‌ ಗಳು ಕೇವಲ ಕೋವಿಡ್‌-19ನಿಂದ ರಕ್ಷಣೆ ಪಡೆಯಲು ಮಾತ್ರವಲ್ಲದೇ ಫ್ಯಾಶನ್ ಸ್ಟೇಟ್‌ಮೆಂಟ್‌ಗಳಾಗಿಬಿಟ್ಟಿವೆ.

ಈ ಮಾಸ್ಕ್‌ಗಳ ಕಾರಣದಿಂದ, ತುಟಿಗಳ ಚಲನೆಯನ್ನು ನೋಡಿಕೊಂಡೇ ಏನು ಮಾತನಾಡುತ್ತಿದ್ದಾರೆ ಎಂದು ಅರಿಯುವ ಜನರಿಗೆ ಸಮಸ್ಯೆಯಾಗಿಬಿಟ್ಟಿದೆ. ಇದಕ್ಕಾಗಿ ಪರಿಹಾರವೊಂದನ್ನು ಕಂಡುಕೊಂಡಿರುವ ನಟಿಯೊಬ್ಬರು, ಪಾರದರ್ಶಕವಾದ ಮಾಸ್ಕ್ ಅನ್ವೇಷಣೆ ಮಾಡಿದ್ದು, ತುಟಿಗಳ ಚಲನೆಯನ್ನು ಗಮನಿಸಿ ಏನು ಹೇಳುತ್ತಿದ್ದಾರೆ ಎಂದು ತಿಳಿಯಬಹುದಾಗಿದೆ. ಇದು ಶ್ರವಣ ದೋಷ ಇರುವ ಮಂದಿಗೆ ನೆರವಾಗಲಿದೆ.

A Quiet Place ಎಂಬ 2018ರ ಚಿತ್ರದಲ್ಲಿ ನಟಿಸಿ ಖ್ಯಾತರಾಗಿರುವ ಮಿಲ್ಲಿ ಸಿಮಂಡ್ಸ್ ಫ್ಯಾಶನ್‌ ಬ್ರಾಂಡ್‌ ರಫಿ ನೋವಾ ಜೊತೆಗೆ ಸೇರಿಕೊಂಡು ‘Millue Smike Mask’ ಅನ್ವೇಷಿಸಿದ್ದಾರೆ. ಈ ಮಾಸ್ಕ್‌ ಪಾರದರ್ಶಕವಾಗಿದ್ದು, ಇದನ್ನು ಧರಿಸಿರುವ ಮಂದಿ ಮಾತನಾಡುವಾಗ ಅವರ ತುಟಿಗಳ ಚಲನೆಯನ್ನು ನೋಡಿಕೊಂಡು, ಏನು ಹೇಳುತ್ತಿದ್ದಾರೆ ಎಂದು ಅರಿಯಲು ನೆರವಾಗಲಿದೆ.

https://www.instagram.com/p/CDeV8dXsTa_/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...