
ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಒಂದು ಹೆದ್ದಾರಿ ಇದೆ. ಅದರ ಮಧ್ಯದಲ್ಲಿ ಒಂದು ಮನೆ ಇದೆ. ಅರೇ ಇದ್ಯಾಕೆ, ರಸ್ತೆ ನಿರ್ಮಾಣ ಮಾಡುವ ವೇಳೆ ಮಹಿಳೆ ಮನೆಯನ್ನು ಏಕೆ ತೆರವುಗೊಳಿಸಿಲ್ಲವೆಂದು ಪ್ರಶ್ನೆ ಏಳಬಹುದು.
ರಸ್ತೆ ನಿರ್ಮಾಣ ಮಾಡುವ ವೇಳೆ ಅಧಿಕಾರಿಗಳು ಅನೇಕ ಬಾರಿ ಮಹಿಳೆಗೆ ಮನವಿ ಮಾಡಿದ್ದಾರೆ. ಆದ್ರೆ ಮಹಿಳೆ ಮನೆ ತೊರೆಯಲು ನಿರಾಕರಿಸಿದ್ದಾಳೆ. ಆಕೆ ಜಿದ್ದಿಗೆ ತಲೆಬಾಗಿದ ಅಧಿಕಾರಿಗಳು ಹೆದ್ದಾರಿಯನ್ನೇ ಬದಲಿಸಿದ್ದಾರೆ.
ಈಗ ಎರಡು ರಸ್ತೆ ಮಧ್ಯೆ ಮಹಿಳೆಯ ಮನೆಯಿದೆ. 40 ಚದರ ಮೀಟರ್ ಜಾಗದಲ್ಲಿ ಮನೆಯಿದೆ. ವಾಹನಗಳ ಸದ್ದಿನ ಮಧ್ಯೆ ಮಹಿಳೆ ಇಲ್ಲಿ ಜೀವನ ನಡೆಸುತ್ತಿದ್ದಾಳೆ.