ಅಪಾಯದ ನಡುವೆಯೂ ಪತಿಯೊಬ್ಬ ಕೊರೊನಾ ಪೀಡಿತ ತನ್ನ ಪತ್ನಿ ಭೇಟಿಗೆ ಮುಂದಾಗಿದ್ದ. ಪತ್ನಿ ಭೇಟಿಯಾಗಿ ಮೂರು ವಾರಗಳ ನಂತ್ರ ಪತಿ ಸಾವನ್ನಪ್ಪಿದ್ದಾನೆ. ಪತಿ ಪಿಪಿಇ ಕಿಟ್ ಹಾಗೂ ಮಾಸ್ಕ್ ಧರಿಸಿ ಪತ್ನಿ ಭೇಟಿಗಾಗಿ ಆಸ್ಪತ್ರೆಗೆ ಹೋಗಿದ್ದ.
ಈ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ. ಸ್ಯಾಮ್ ರೇಕ್ಗೆ 90 ವರ್ಷ. ಜುಲೈ 12 ರಂದು 86 ವರ್ಷದ ಪತ್ನಿ ಜೊವಾನ್ನೆ ಕೊರೊನಾದಿಂದ ನಿಧನಳಾದಳು. ಸಾಯುವ ಕೆಲವೇ ಗಂಟೆಗಳ ಮೊದಲು ಸ್ಯಾಮ್ ಆಕೆಯನ್ನು ಭೇಟಿಯಾಗಿದ್ದ. ಇದರ ನಂತರ ಸ್ಯಾಮ್ ಗೂ ಕೊರೊನಾ ಕಾಣಿಸಿಕೊಂಡಿದ್ದಲ್ಲದೆ ಆತ ಆಗಸ್ಟ್ 1 ರಂದು ಸಾವನ್ನಪ್ಪಿದ್ದಾನೆ.
ತಂದೆಗೆ ಅಪಾಯದ ಬಗ್ಗೆ ತಿಳಿದಿತ್ತು. ಆದ್ರೂ ಪತ್ನಿ ಭೇಟಿಗೆ ಅವರು ಮುಂದಾಗಿದ್ದರು ಎಂದು ಮಗಳು ಹೇಳಿದ್ದಾಳೆ. ಆಸ್ಪತ್ರೆಗೆ ಹೋಗಿ ಅವರನ್ನು ಭೇಟಿಯಾದ್ಮೇಲೆ ನಿಮಗೆ ಕೊರೊನಾ ಬಂದಿದ್ದು, ಇದು ಬೇಸರ ತಂದಿದ್ಯಾ ಎಂದು ನಾನು ಕೇಳಿದ್ದೆ. ಆದ್ರೆ ತಂದೆ ಇದಕ್ಕೆ ಇಲ್ಲ. ಕೊನೆಯ ಬಾರಿ ಪತ್ನಿ ಕೈ ಹಿಡಿಯುವ ಅವಕಾಶ ಸಿಕ್ಕಿದ್ದು, ನನಗೆ ಖುಷಿ ತಂದಿತ್ತು ಎಂದು ಸ್ಯಾಮ್ ಕೇಳಿದ್ದರು ಎಂದು ಮಗಳು ಹೇಳಿದ್ದಾಳೆ.