ಸದ್ಯ ಹೈಸ್ಪೀಡ್ ಮೊಬೈಲ್ ಇಂಟರ್ನೆಟ್ ಬಳಕೆ ಹೆಚ್ಚುತ್ತಿದೆ. ಕೊರೊನಾ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಹೈಸ್ಪೀಡ್ ಇಂಟರ್ನೆಟ್ ಗೆ ಗ್ರಾಹಕರು ಮಾನ್ಯತೆ ನೀಡ್ತಿದ್ದಾರೆ. ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ತಮ್ಮ ಬಳಕೆದಾರರಿಗೆ 2 ಜಿಬಿ ಡೇಟಾದೊಂದಿಗೆ ಅನೇಕ ಆಫರ್ ನೀಡ್ತಿವೆ.
ರಿಲಯನ್ಸ್ ಜಿಯೋ 249 ರೂಪಾಯಿ ಯೋಜನೆಯಲ್ಲಿ 2 ಜಿಬಿ ಡೇಟಾ ನೀಡ್ತಿದೆ. ಇದ್ರಲ್ಲಿ ಅನಿಯಮಿತ ಕರೆ ಮತ್ತು 100 ಉಚಿತ ಎಸ್ಎಂಎಸ್ ಸಿಗ್ತಿದೆ. ಬೇರೆ ನೆಟ್ವರ್ಕ್ಗಳಿಗೆ ಕರೆ ಮಾಡಲು 1000 ನಿಮಿಷಗಳನ್ನು ನೀಡಲಾಗುತ್ತಿದೆ. ಇದು 28 ದಿನಗಳ ಸಿಂಧುತ್ವ ಹೊಂದಿದೆ.
ಇನ್ನು 444 ರೂಪಾಯಿ ಜಿಯೋ ಯೋಜನೆ ಸಿಂಧುತ್ವ 56 ದಿನಗಳು. ಪ್ರತಿ ದಿನ 2 ಜಿಬಿ ಡೇಟಾ ಜೊತೆ 100 ಎಸ್ಎಂಎಸ್ ಸಿಗ್ತಿದೆ. ಇತರ ನೆಟ್ವರ್ಕ್ಗಳಿಗೆ ಕರೆ ಮಾಡಲು 2000 ನಿಮಿಷಗಳನ್ನು ನೀಡಲಾಗುತ್ತಿದೆ.
ಜಿಯೋ 599 ರೂಪಾಯಿ ಪ್ಲಾನ್ ನಲ್ಲೂ 2 ಜಿಬಿ ಡೇಟಾ ಸಿಗಲಿದೆ. 100 ಎಸ್ಎಂಎಸ್ ಯೋಜನೆ ಇತರ ನೆಟ್ವರ್ಕ್ ಗೆ 3 ಸಾವಿರ ನಿಮಿಷಗಳನ್ನು ಉಚಿತವಾಗಿ ನೀಡಲಾಗ್ತಿದೆ. ಇದ್ರ ಸಿಂಧುತ್ವ 84 ದಿನಗಳು.
ಏರ್ಟೆಲ್ ಕೂಡ 298 ರೂಪಾಯಿ ಯೋಜನೆಯಲ್ಲಿ 2ಜಿಬಿ ಡೇಟಾ ನೀಡ್ತಿದೆ. 100 ಎಸ್ಎಂಎಸ್ ಮತ್ತು ಅನಿಯಮಿತ ಕರೆಗಳನ್ನು ಪ್ರತಿದಿನ ನೀಡುತ್ತಿದೆ. ಈ ಯೋಜನೆಯ ಸಿಂಧುತ್ವವು 28 ದಿನಗಳು.
ಪ್ರತಿ ದಿನ 2ಜಿಬಿ ಡೇಟಾ ನೀಡುವ ಇನ್ನೊಂದು ಏರ್ಟೆಲ್ ಯೋಜನೆ ಬೆಲೆ 349 ರೂಪಾಯಿ. ಉಚಿತ ಅಮೆಜಾನ್ ಚಂದಾದಾರಿಕೆ ಜೊತೆ 100 ಎಸ್ಎಂಎಸ್ ಸಿಗ್ತಿದೆ. ಇದು 28 ದಿನಗಳ ಸಿಂಧುತ್ವ ಹೊಂದಿದೆ.
ಏರ್ಟೆಲ್ ನ 449 ರೂಪಾಯಿ ಯೋಜನೆಯಲ್ಲೂ ಪ್ರತಿ ದಿನ 2ಜಿಬಿ ಡೇಟಾ ಸಿಗಲಿದೆ. 100 ಉಚಿತ ಎಸ್ಎಂಎಸ್ ನೊಂದಿಗೆ 56 ದಿನಗಳ ಸಿಂಧುತ್ವವನ್ನು ಇದು ಹೊಂದಿದೆ.
ಇನ್ನು ವೊಡಾಫೋನ್ ಕೂಡ 249 ರೂಪಾಯಿ ಪ್ಲಾನ್ ನೀಡ್ತಿದೆ. ಇದ್ರಲ್ಲಿ 2 ಜಿಬಿ ಬದಲು 4 ಜಿಬಿ ಡೇಟಾ,100 ಎಸ್ ಎಂಎಸ್ ಸಿಗ್ತಿದೆ.ಇದರ ಸಿಂಧುತ್ವ 28 ದಿನಗಳು.
ವೊಡಾಫೋನ್ 449 ರೂಪಾಯಿ ಯೋಜನೆಯಲ್ಲೂ ಪ್ರತಿ ದಿನ 2ಜಿಬಿ ಡೇಟಾ ಸಿಗಲಿದೆ. 100 ಎಸ್ ಎಂಎಸ್ ಸಿಗಲಿದೆ. ಇದ್ರ ಸಿಂಧುತ್ವ 56 ದಿನಗಳು. ವೊಡಾಫೋನ್ 699 ರೂಪಾಯಿ ಯೋಜನೆಯಲ್ಲಿ, ಪ್ರತಿದಿನ 100 ಎಸ್ಎಂಎಸ್ಗಳನ್ನು 2 ಜಿಬಿ ಡೇಟಾದೊಂದಿಗೆ ಉಚಿತವಾಗಿ ನೀಡಲಾಗುತ್ತಿದೆ. ಇದರ ಸಿಂಧುತ್ವವು 84 ದಿನಗಳು.