alex Certify ರಾಣಾ ಪತ್ನಿ ಮಿಹಿಕಾ ತಮ್ಮ ಮದುವೆಗೆ ತೊಟ್ಟಿದ್ದ ಲೆಹೆಂಗಾ ಬೆಲೆ ಕೇಳಿದ್ರೆ ದಂಗಾಗ್ತೀರಾ…!..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಣಾ ಪತ್ನಿ ಮಿಹಿಕಾ ತಮ್ಮ ಮದುವೆಗೆ ತೊಟ್ಟಿದ್ದ ಲೆಹೆಂಗಾ ಬೆಲೆ ಕೇಳಿದ್ರೆ ದಂಗಾಗ್ತೀರಾ…!..!

ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಕೋವಿಡ್ ಭೀತಿಯಿಂದಾಗಿ ಸರಳವಾಗಿಯೇ ಈ ಜೋಡಿ ವಿವಾಹವಾಗಿದ್ದಾರೆ. ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ಸರಳವಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಸಮಂತಾ, ನಾಗಚೈತನ್ಯ, ಅಲ್ಲು ಅರ್ಜುನ್, ವೆಂಕಟೇಶ್ ಸೇರಿದಂತೆ ಈ ಜೋಡಿಯ ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

ಮಿಹಿಕಾ ಮೂಲತಃ ಹೈದರಾಬಾದ್‌ನ ಉದ್ಯಮಿ. ಲಂಡನ್‌ನ ಚೆಲ್ಸಾ ವಿವಿಯಿಂದ ಇಂಟೀರಿಯರ್ ಡಿಸೈನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಮುತ್ತಿನ ನಗರಿಯಲ್ಲಿ ಇಂಟೀರಿಯರ್ ಡೆಕೊರೇಷನ್ ಹಾಗೂ ಇವೆಂಟ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ಡ್ನೂ ಡ್ರಾಪ್ ಡಿಸೈನ್ ಸ್ಟುಡಿಯೋ ಎಂಬ ಕಂಪನಿ ನಡೆಸುತ್ತಿದ್ದಾರೆ.

ಇನ್ನು ಸರಳವಾಗಿ ನಡೆದ ಮದುವೆಯಲ್ಲಿ ರಾಣಾ ದಗ್ಗುಬಾಟಿ ಆಫ್-ವೈಟ್ ಶೆರ್ವಾನಿಯಲ್ಲಿ ಮಿಂಚಿದರೆ, ಮಿಹಿಕಾ ಬಜಾಜ್ ಗೋಲ್ಡ್ ಮತ್ತು ಕ್ರೀಮ್ ಲೆಹಂಗಾದ ಜೊತೆ ಕೆಂಪು ಶಾಲಿನೊಂದಿಗೆ ಸುಂದರವಾಗಿ ಕಾಣಿಸುತ್ತಿದ್ದರು.

ಮೊದಲೇ ಇಂಟೀರಿಯರ್ ಡಿಸೈನರ್ ಆಗಿರುವ ರಾಣಾ ಪತ್ನಿ ತಮ್ಮ ಉಡುಗೆ ತೊಡುಗೆಯಲ್ಲೂ ವಿಶೇಷವಾಗಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ತಮ್ಮ ಮದುವೆಗೆ ತೊಟ್ಟಿದ್ದ ಲೆಹೆಂಗಾ. ಹೌದು, ಮಿಹಿಕಾ ತಮ್ಮ ಮದುವೆಯಲ್ಲಿ ತೊಟ್ಟಿರುವ ಲೆಹೆಂಗಾ ಬೆಲೆ ಬರೋಬ್ಬರಿ 6 ಲಕ್ಷವಂತೆ. ಈ ಲೆಹೆಂಗವನ್ನು ಖ್ಯಾತ ವಸ್ತ್ರವಿನ್ಯಾಸಕಿ ಅನಾಮಿಕಾ ಖನ್ನಾ ಅವರು ತಯಾರು ಮಾಡಿದ್ದಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...