ಕೊಲಂಬೊ: ಶ್ರೀಲಂಕಾ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ 4 ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಐತಿಹಾಸಿಕ ಬೌದ್ಧ ದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ಅವರ ಸಹೋದರ ರಾಷ್ಟ್ರಪತಿ ಗೋಟಬಯ ರಾಜಪಕ್ಸ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
ಶ್ರೀಲಂಕಾದ ಮಾಜಿ ಅಧ್ಯಕ್ಷರಾಗಿರುವ ಮಹಿಂದಾ ರಾಜಪಕ್ಸ ನೇತೃತ್ವದ ಶ್ರೀಲಂಕನ್ ಪೀಪಲ್ಸ್ ಪಾರ್ಟಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿದ್ದು, 225 ಸದಸ್ಯಬಲದ ಶ್ರೀಲಂಕಾ ಸಂಸತ್ನಲ್ಲಿ ಮಹಿಂದಾ ರಾಜಪಕ್ಷೆ ಅವರ ಪಕ್ಷ 145 ಸ್ಥಾನಗಳಲ್ಲಿ ಜಯಗಳಿಸಿದೆ. ಶ್ರೀಲಂಕಾ ಪ್ರಧಾನಿಯಾಗಿ ಪುನರ್ ಆಯ್ಕೆಯಾದ ಮಹಿಂದಾ ರಾಜಪಕ್ಸ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡಿದ್ದಾರೆ.