ಲಾಕ್ಡೌನ್ ಸಡಿಲಿಕೆ ಬಳಿಕ ಚಿನ್ನಾಭರಣಗಳ ವಹಿವಾಟು ಆರಂಭವಾಗಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆ ಸತತ ಏರಿಕೆ ಕಾಣುತ್ತಿದೆ. ಈಗ ಶ್ರಾವಣ ಮಾಸ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹಬ್ಬ – ಹರಿದಿನಗಳು ಆರಂಭವಾಗುವುದರ ಜೊತೆಗೆ ವಿವಾಹ ಸಮಾರಂಭಗಳಿಗೆ ಶುಭ ಮುಹೂರ್ತ ಕೂಡಿ ಬರುತ್ತದೆ.
ಇಂತಹ ಸಂದರ್ಭದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಮುಗಿಲು ಮುಟ್ಟಿರುವುದು ಖರೀದಿದಾರರನ್ನು ಕಂಗಾಲಾಗಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆ, ರೂಪಾಯಿ ಎದುರು ಡಾಲರ್ ಮೌಲ್ಯ ಏರಿಕೆ ಜೊತೆಗೆ ಹೂಡಿಕೆದಾರರು ಸುರಕ್ಷಿತ ಎನ್ನುವ ಕಾರಣಕ್ಕೆ ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗಿರುವುದು ಬೆಲೆ ಏರಿಕೆಗೆ ಕಾರಣವೆಂದು ಹೇಳಲಾಗಿದೆ.
ಈ ವರ್ಷ ಕಳೆದ ಏಳು ತಿಂಗಳ ಅವಧಿಯಲ್ಲಿ ಚಿನ್ನದ ದರ ಶೇಕಡ 40 ರಷ್ಟು ಏರಿಕೆಯಾಗಿದ್ದು, ಶುಕ್ರವಾರದಂದು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಶುದ್ಧ ಚಿನ್ನದ ದರ 57000 ರೂಪಾಯಿ ತಲುಪಿದೆ. ಮುಂದಿನ ದಿನಗಳಲ್ಲೂ ಇದೇ ಟ್ರೆಂಡ್ ಮುಂದುವರೆಯಲಿದೆ ಎನ್ನಲಾಗಿದ್ದು, ದೀಪಾವಳಿ ವೇಳೆಗೆ ಚಿನ್ನದ ದರ 70 ಸಾವಿರ ರೂಪಾಯಿ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.