ನಿತ್ಯ ಒಗ್ಗರಣೆಯಲ್ಲಿ ಬಳಸುವ ಕರಿಬೇವು ಆರೋಗ್ಯ ಸುಧಾರಣೆಗೆ ಉಪಕಾರಿ. ಅದರೊಂದಿಗೆ ಕರಿಬೇವಿನ ಕಷಾಯ ಮಾಡಿ ನಿತ್ಯ ಮಕ್ಕಳಿಗೆ ಕುಡಿಯಲು ಕೊಟ್ಟರೆ ಕಣ್ಣಿನ ದೃಷ್ಟಿ ಚುರುಕಾಗುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ.
ನುಗ್ಗೆ ಸೊಪ್ಪಿನ ಪಲ್ಯ, ಸಾಂಬಾರ ಮಾಡಿಕೊಂಡು ತಿನ್ನಿ. ಹಾಗೇನೇ ನುಗ್ಗೆ ಸೊಪ್ಪಿನ ಕಷಾಯ ಮಾಡಿಕೊಂಡು ಕುಡಿಯಿರಿ.
ಸಬ್ಬಸ್ಸಿಗೆ ಸೊಪ್ಪನ್ನು ಆಹಾರದಲ್ಲಿ ಸೇವಿಸುವುದರಿಂದ ಉತ್ತಮ ದೃಷ್ಟಿ ಪಡೆಯಬಹುದು.
ಪುದೀನಾ ಸೊಪ್ಪಿನ ಕಷಾಯ, ಪುಂಡಿ ಸೊಪ್ಪಿನ ಚಟ್ನಿಯಿಂದ ದೃಷ್ಟಿ ಹೆಚ್ಚುವುದರೊಂದಿಗೆ ಹೆಣ್ಣು ಮಕ್ಕಳ ಋತು ಚಕ್ರದ ಸಮಸ್ಯೆಯೂ ನಿವಾರಣೆ ಆಗುತ್ತದೆ.
ಒಂದೆಲಗ ಸೊಪ್ಪು ಕಷಾಯ ಮಾಡಿಕೊಂಡು ಕುಡಿದರೆ ಬುದ್ದಿ ಶಕ್ತಿ ಹೆಚ್ಚಾಗುತ್ತದೆ.
ವೀಳ್ಯದೆಲೆಯ ತೊಟ್ಟು ತೆಗೆದು ಕಷಾಯ ಮಾಡಿದರೆ, ಸೀಬೆ ಮರದ ಕಷಾಯ ಮಾಡಿ ಕುಡಿದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
ಮೇಲೆ ಹೇಳಿದ ಯಾವುದಾದರೊಂದು ಕಷಾಯವನ್ನು ಕನಿಷ್ಠ ಒಂದು ತಿಂಗಳು ಬಳಸಿ ನೋಡಿ. ಎಲ್ಲವನ್ನೂ ಒಮ್ಮೆಗೇ ಪ್ರಯತ್ನಿಸದಿರಿ. ಮೂರು ತಿಂಗಳ ಬಳಿಕ ನಿಮ್ಮ ಕಣ್ಣಿನ ದೃಷ್ಟಿ ಸುಧಾರಿಸಿರುವುದು ನಿಮಗೇ ಅರಿವಾಗುತ್ತದೆ.