ಮೆಟ್ರೋ ನಗರಗಳಲ್ಲಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ ತಿಂಗಳು ಒಂದೇ ಮಟ್ಟ ಕಾಯ್ದುಕೊಂಡಿದೆ. ಸಾಮಾನ್ಯವಾಗಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿದೆ.
ಸಾಮಾನ್ಯವಾಗಿ ಯಾವುದೇ ಪರಿಷ್ಕರಣೆ ತಿಂಗಳ ಮೊದಲ ದಿನದಲ್ಲಿ ಜಾರಿಗೆ ತರಲಾಗುತ್ತದೆ. ಅಂದಹಾಗೆ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಎಲ್.ಪಿ.ಜಿ. ಬೆಲೆ ಕೊಲ್ಕೊತ್ತಾದಲ್ಲಿ ಐವತ್ತು ಪೈಸೆ ಹೆಚ್ಚಿಸಲಾಗಿದೆ. ಉಳಿದ ಕಡೆ ಬದಲಿಲ್ಲ.
ದೆಹಲಿ ಮತ್ತು ಮುಂಬೈನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನ ಇಂಡೇನ್ ಬ್ರಾಂಡ್ ಸಬ್ಸಿಡಿ ರಹಿತ ಎಲ್.ಪಿ.ಜಿ. ಸಿಲಿಂಡರ್ 594 ರೂ.ಗೆ ಲಭ್ಯವಾಗುತ್ತಿದೆ. ಕೊಲ್ಕೊತ್ತಾ ಮತ್ತು ಚೆನ್ನೈನಲ್ಲಿ ಕ್ರಮವಾಗಿ 621 ಮತ್ತು 610.50 ಗೆ ದೊರೆಯುತ್ತಿದೆ. ಫೆಬ್ರವರಿಯಲ್ಲಿ ಇದರ ಬೆಲೆ 858 ರೂ.ವರೆಗೂ ತಲುಪಿತ್ತು.
ಸದ್ಯ ಸರ್ಕಾರವು ವರ್ಷಕ್ಕೆ ಮನೆ ಬಳಕೆಗೆ 14.3 ಕೆಜಿಯ ಸಬ್ಸಿಡಿ ಸಹಿತ 12 ಸಿಲಿಂಡರ್ ಗಳನ್ನು ನೀಡುತ್ತಿದೆ. ಗ್ರಾಹಕರು ಈ 12ರ ಹೊರತಾಗಿ ಹೆಚ್ಚುವರಿ ಸಿಲಿಂಡರ್ ಅಗತ್ಯವಿದ್ದರೆ ಮಾರುಕಟ್ಟೆ ದರದ ಪ್ರಕಾರ ಖರೀದಿಸಬೇಕಾಗುತ್ತದೆ.
City | Price In Rupees Per 14.2 KG Cylinder | |
---|---|---|
With Effect From August 1 | Existing | |
Delhi | 594.00 | 594.00 |
Kolkata | 621.00 | 620.50 |
Mumbai | 594.00 | 594.00 |
Chennai | 610.50 | 610.50 |
(Source: iocl.com) |