alex Certify ಪ್ರೀತಿಸಿ ಮದುವೆಯಾದ ಪತ್ನಿ ಕೊರೊನಾದಿಂದ ಸಾವು: ಪರಾರಿಯಾದ ಪತಿ ನಾಟ್ ರೀಚಬಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾದ ಪತ್ನಿ ಕೊರೊನಾದಿಂದ ಸಾವು: ಪರಾರಿಯಾದ ಪತಿ ನಾಟ್ ರೀಚಬಲ್

ಬೆಂಗಳೂರು: ಪತ್ನಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದಾನೆ.

ಕೋವಿಡ್ ಗೆ ಪತ್ನಿ ಬಲಿಯಾಗಿದ್ದರೂ ಅಂತ್ಯಕ್ರಿಯೆಗೆ ಕೂಡ ಪತಿರಾಯ ಆಗಮಿಸಿಲ್ಲ. ಬೆಂಗಳೂರಿನ ಶಂಕರಮಠ ವಾರ್ಡ್ ಜೆಸಿ ನಗರದಲ್ಲಿ ದಂಪತಿ ವಾಸವಾಗಿದ್ದು ಪ್ರೀತಿಸಿ ಮದುವೆಯಾಗಿದ್ದರು. ಪತಿ ಕಾರ್ ಚಾಲಕನಾಗಿದ್ದು, ಪತ್ನಿ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದರು.

ನಾಲ್ಕೈದು ದಿನಗಳಿಂದ ಪತ್ನಿಗೆ ಅನಾರೋಗ್ಯವಾಗಿದ್ದ ಹಿನ್ನಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಪತ್ನಿಗೆ ಪತಿ ಕೋವಿಡ್ ಟೆಸ್ಟ್ ಮಾಡಿಸಿದ್ದು, ಕೊರೋನಾ ಪಾಸಿಟಿವ್ ವರದಿ ಬಂದಿತ್ತು. ಪತ್ನಿಗೆ ಸೋಂಕು ತಗುಲಿರುವುದು ಗೊತ್ತಾಗುತ್ತಿದ್ದಂತೆ ಪತಿರಾಯ ಮನೆ ಬಿಟ್ಟು ಹೋಗಿದ್ದಾನೆ. ಕೊರೋನಾ ಹಾಗೂ ತೀವ್ರ ಅನಾರೋಗ್ಯದಿಂದ ಪತ್ನಿ ಸಾವನ್ನಪ್ಪಿದ್ದು, ಪತ್ನಿಯ ಅಂತ್ಯಸಂಸ್ಕಾರಕ್ಕೆ ಕರೆ ಮಾಡಿದರೂ ಪತಿರಾಯ ಬಂದಿಲ್ಲ. ಕರೆಯನ್ನು ಸ್ವೀಕರಿಸದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಬಳಿಕ ಸ್ಥಳೀಯ ಕಾರ್ಪೋರೇಟರ್ ರಿಂದ ಕೋವಿಡ್ ನಿಯಮದಂತೆ ಮೃತಳ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...