ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಸವರನ್ ಗೋಲ್ಡ್ ಬಾಂಡ್ ಯೋಜನೆ 2020 -21ನೇ ಐದನೇ ಹಂತದ ವಿತರಣೆ ಶುಕ್ರವಾರ ಕೊನೆಗೊಂಡಿದೆ.
ಆಗಸ್ಟ್ 31 ರಿಂದ ಸೆಪ್ಟೆಂಬರ್ 4ರವರೆಗೆ 5 ದಿನಗಳ ಕಾಲ ಮತ್ತೊಮ್ಮೆ ವಿತರಣೆ ಕಾರ್ಯ ನಡೆಯಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನದ ಬಾಂಡ್ ಗಳ ಆರನೇ ಮತ್ತು ಕೊನೆಯ ಕಂತು ಇದಾಗಿದ್ದು ಚಂದಾದಾರರಾಗಬಹುದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಈ ಬಾಂಡ್ ಗಳ ಮೌಲ್ಯ ಚಿನ್ನದ ಮಾರುಕಟ್ಟೆ ಬೆಲೆಯನ್ನು ಆಧರಿಸಿರುತ್ತದೆ. ಬಾಂಡ್ ಗಳು ವಾರ್ಷಿಕ ಹೆಚ್ಚುವರಿ ಶೇಕಡ 2.5 ರಷ್ಟು ಆದಾಯ ಒದಗಿಸುತ್ತವೆ. 2015 ರಲ್ಲಿ ಆರಂಭವಾದ ಗೋಲ್ಡ್ ಬಾಂಡ್ ಯೋಜನೆ ದೇಶಕ್ಕೆ ಚಿನ್ನದ ಆಮದು ತಡೆಯುವ ಗುರಿ ಹೊಂದಿದೆ.
ಆರ್ಥಿಕ ವರ್ಷದಲ್ಲಿ ಕನಿಷ್ಠ ಒಂದು ಗ್ರಾಮ್ ನಿಂದ ಗರಿಷ್ಠ 4 ಕೆಜಿ ವರೆಗೂ ವ್ಯಕ್ತಿಗಳು, ಸಂಸ್ಥೆಗಳು, ಟ್ರಸ್ಟ್ ಗಳು 20 ಕೆಜಿವರೆಗೆ ಗೋಲ್ಡ್ ಬಾಂಡ್ ಖರೀದಿಸಬಹುದು. ಸರಾಸರಿ ಆಭರಣ ದರಗಳ ಆಧಾರದ ಮೇಲೆ ಬಾಂಡ್ ಬೆಲೆ ನಿಗದಿ ಮಾಡಲಾಗುವುದು ಎಂದು ಹೇಳಲಾಗಿದೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡುವ ಹೂಡಿಕೆದಾರರಿಗೆ 50 ರೂ. ರಿಯಾಯಿತಿ ನೀಡಲಾಗುವುದು ಎನ್ನಲಾಗಿದೆ.