alex Certify ಕೂದಲು ಒರಟಾಗಿದೆಯಾ…? ಇಲ್ಲಿದೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲು ಒರಟಾಗಿದೆಯಾ…? ಇಲ್ಲಿದೆ ಪರಿಹಾರ

ಕೂದಲಿನಲ್ಲಿ ಎಣ್ಣೆಯಂಶ ಕಡಿಮೆಯಾದಂತೆ ಒರಟಾಗತೊಡಗುತ್ತದೆ. ಲಾಕ್ ಡೌನ್ ಪರಿಣಾಮವಾಗಿ ನೀವು ಬ್ಯೂಟಿ ಪಾರ್ಲರ್ ಗೂ ಹೋಗುವಂತಿಲ್ಲ. ಅದಕ್ಕಾಗಿ ಚಿಂತಿಸಬೇಕಿಲ್ಲ. ಮನೆ ಮದ್ದುಗಳ ಮೂಲಕ ಒರಟಾದ ಕೂದಲ ಸಮಸ್ಯೆಯನ್ನು ನಿವಾರಿಸಬಹುದು.

ರಾತ್ರಿ ಎರಡು ಚಮಚ ಮೆಂತೆಯನ್ನು ನೆನೆ ಹಾಕಿ. ಮರುದಿನ ಬೆಳಿಗ್ಗೆ ಅರ್ಧ ಈರುಳ್ಳಿ, 1 ಚಮಚ ತೆಂಗಿನೆಣ್ಣೆ, 1 ಚಮಚ ಮೊಸರು ಬೆರೆಸಿ ನಯವಾಗಿ ರುಬ್ಬಿ.

ಈ ಪೇಸ್ಟ್ ಅನ್ನು ಕೂದಲಿನ ಬುಡವೂ ಸೇರಿದಂತೆ ಪೂರ್ತಿ ತಲೆಗೆ ಹಚ್ಚಿ. ಬಳಿಕ ತಲೆಗೆ ಶವರ್ ಕ್ಯಾಪ್ ಅಥವಾ ಪ್ಲಾಸ್ಟಿಕ್ ಕವರ್ ಹಾಕಿ ಎರಡು ಗಂಟೆ ಬಿಡಿ.

ನಂತರ ಉಗುರು ಬೆಚ್ಚಗಿನ ನೀರಿನಿಂದ ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ. ಇದರಿಂದ ನಿಮ್ಮ ಒರಟು ತಲೆಕೂದಲಿನ ಸಮಸ್ಯೆ ನಿವಾರಣೆಯಾಗಿ ಮೃದುವಾದ ರೇಷ್ಮೆಯಂತ ಕೂದಲು ನಿಮ್ಮದಾಗುತ್ತದೆ.

ಈ ಮಿಶ್ರಣವನ್ನು ಬಳಸುವುದರಿಂದ ಸಿಗುವ ಇತರ ಲಾಭಗಳೆಂದರೆ ಕೂದಲು ಉದುರುವುದಿಲ್ಲ ಹಾಗೂ ಕೂದಲು ಉದ್ದವಾಗಿ ಬೆಳೆಯುತ್ತದೆ. ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ. ತಲೆ ಹೊಟ್ಟಿನ ಸಮಸ್ಯೆಯೂ ದೂರವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...