ಕೊರೊನಾ ವೈರಸ್ ಮಧ್ಯೆ ಖುಷಿ ಸುದ್ದಿ ಸಿಕ್ಕಿತ್ತು. ವಿಮಾನ ಕಂಪನಿಗಳು ದೇಶಿಯ ಹಾರಾಟದ ವಿಮಾನಗಳ ಟಿಕೆಟ್ ಬೆಲೆ ಹೆಚ್ಚಿಸುವಂತಿಲ್ಲ. ದೇಶೀಯ ಮಾರ್ಗಗಳಲ್ಲಿ ವಿಮಾನ ಟಿಕೆಟ್ ವೆಚ್ಚದ ಮೇಲೆ ವಿಧಿಸಲಾದ ಕ್ಯಾಪ್ ಅನ್ನು ನವೆಂಬರ್ 24 ರವರೆಗೆ ವಿಸ್ತರಿಸಲಾಗಿದೆ.
ಸರ್ಕಾರದ ಈ ನಿರ್ಧಾರದಿಂದ ವಿಮಾನಯಾನ ಕಂಪನಿಗಳು ನವೆಂಬರ್ 24 ರವರೆಗೆ ಶುಲ್ಕವನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಆದರೆ ವಿಮಾನ ಟಿಕೆಟ್‌ಗಳ ಬೇಡಿಕೆ ಹೆಚ್ಚಾದರೆ ನವೆಂಬರ್ 24 ಕ್ಕಿಂತ ಮೊದಲೇ ಅದರ ಮೇಲಿನ ಕ್ಯಾಪ್ ತೆಗೆಯಬಹುದು ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ವಿಮಾನಯಾನ ಕಂಪೆನಿಗಳ ಒಟ್ಟು ಸಾಮರ್ಥ್ಯದ ಶೇಕಡಾ 50 ರಷ್ಟು ವಿಮಾನ ಟಿಕೆಟ್‌ಗಳಿಗೆ ಬೇಡಿಕೆ ಬಂದ ಕೂಡಲೇ ನಾವು ವಿಮಾನ ದರಗಳಿಗೆ ವಿಧಿಸಲಾಗಿರುವ ಕನಿಷ್ಠ ಮತ್ತು ಗರಿಷ್ಠ ಮೊತ್ತವನ್ನು ತೆಗೆದು ಹಾಕುತ್ತೇವೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.