ಕೊರೊನಾ ಈಗ ವಿಲನ್ ಆಗಿದೆ. ಕೊರೊನಾ ಬಂದವರನ್ನು ಸುತ್ತಮುತ್ತಲಿನ ಜನರು ಶತ್ರುಗಳಂತೆ ನೋಡ್ತಿದ್ದಾರೆ. ಕೊರೊನಾಗೆ ಚಿಕಿತ್ಸೆ ಹೆಚ್ಚು ವೆಚ್ಚವಾಗುತ್ತದೆ ಎನ್ನುವ ಕಾರಣ ನೀಡಿ ಅನೇಕರು ಕೊರೊನಾ ಬಂದಿರುವುದನ್ನೇ ಮುಚ್ಚಿಡುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಔರಂಗಾಬಾದ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ.
90 ವರ್ಷದ ತಾಯಿಗೆ ಕೊರೊನಾ ಎಂಬುದು ಗೊತ್ತಾಗ್ತಿದ್ದಂತೆ ಮಗ ಆಕೆಯನ್ನು ಕಾಡಿನಲ್ಲಿ ಬಿಟ್ಟು ಬಂದಿದ್ದಾನೆ. ಕಾಡಿನಲ್ಲಿ ಮಹಿಳೆ ಒದ್ದಾಡುತ್ತಿರುವುದು ಕಂಡು ಬಂದಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆಗೆ ಕೊರೊನಾ ಕಾಣಿಸಿಕೊಂಡಿತ್ತಂತೆ. ಈ ವಿಷ್ಯ ಗೊತ್ತಾಗ್ತಿದ್ದಂತೆ ಮನೆಯವರು ಮಹಿಳೆಯನ್ನು ಇಟ್ಟುಕೊಳ್ಳಲು ನಿರಾಕರಿಸಿದ್ದಾರೆ. ತಾಯಿಯನ್ನು ಚಾದರದಲ್ಲಿ ಸುತ್ತಿ ಕಾಡಿನಲ್ಲಿ ಮಗ ಬಿಟ್ಟು ಹೋಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆ ಕುಟುಂಬಸ್ಥರ ಹುಡುಕಾಟ ಶುರು ಮಾಡಿದ್ದಾರೆ.