ಕೇರಳದ ಕಲ್ಲಿಕೋಟೆಯಲ್ಲಿ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ 2 ತುಂಡಾಗಿ ಬಿದ್ದು 20 ಮಂದಿ ಪಟ್ಟಿದ್ದಾರೆ. 123 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ. ದುರಂತದಲ್ಲಿ ಇಬ್ಬರು ಮಕ್ಕಳು ಸೇರಿ 20 ಮಂದಿ ಸಾವನ್ನಪ್ಪಿದ್ದಾರೆ. 123 ಜನ ಗಾಯಗೊಂಡಿದ್ದಾರೆ. 25 ಜನರ ಸ್ಥಿತಿ ಗಂಭೀರವಾಗಿದೆ.
ರನ್ ವೇಯಿಂದ ವಿಮಾನ ಜಾರಿ ಎರಡು ತುಂಡಾಗಿದೆ. ಅಪಘಾತದ ನಂತರ ಬೆಂಕಿ ಹೊತ್ತಿಕೊಳ್ಳದ ಕಾರಣ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬದುಕುಳಿದಿದ್ದಾರೆ. ಭಾರಿ ಮಳೆಯಿಂದಾಗಿ ಮಂದಬೆಳಕು ಇತ್ತು.
ರಾತ್ರಿ 7.40 ರ ಸುಮಾರಿಗೆ ವಿಮಾನ ರನ್ ವೇ ಜಾಗವನ್ನು ಪೂರ್ಣ ಕ್ರಮಿಸಿದ ವಿಮಾನ ನಿಗದಿತ ಜಾಗಕ್ಕಿಂತ 35 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಗೋಡೆಗೆ ಡಿಕ್ಕಿ ಹೊಡೆದು 2 ತುಂಡಾಗಿದೆ. ದುರಂತದಲ್ಲಿ ಇಬ್ಬರು ಪೈಲಟ್ ಗಳು ಮತ್ತು 5 ಸಿಬ್ಬಂದಿ, 10 ಮಕ್ಕಳು ಸೇರಿ 184 ಪ್ರಯಾಣಿಕರಿದ್ದರು.