ಹಬ್ಬಕ್ಕೆ ಏನಾದರೂ ಸಿಹಿ ಮಾಡಬೇಕು ಅಂದುಕೊಂಡಿದ್ದೀರಾ. ಇಲ್ಲಿ ಸುಲಭವಾಗಿ ಮಾಡುವ ರವಾ ಆಪಂ ಇದೆ. ಇದು ತಿನ್ನುವುದಕ್ಕೆ ಕೂಡ ತುಂಬಾ ರುಚಿಕರವಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ರವೆ – 1/2 ಕಪ್, ಸಕ್ಕರೆ – 1/2 ಕಪ್, ನೀರು – 1 ಕಪ್, ತೆಂಗಿನಕಾಯಿ ತುರಿ – 3 ಟೇಬಲ್ ಸ್ಪೂನ್, ಏಲಕ್ಕಿ ಪುಡಿ – 1 ಟೀ ಸ್ಪೂನ್, ತುಪ್ಪ – 1 ಟೇಬಲ್ ಸ್ಪೂನ್, ಎಣ್ಣೆ – ಕರಿಯಲು.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ರವೆ ಹಾಕಿ ಪರಿಮಳ ಬರುವವರೆಗೆ ಹುರಿದುಕೊಂಡು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ನಂತರ ಅದೇ ಪ್ಯಾನ್ ಗೆ ನೀರು ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಸ್ವಲವೇ ರವೆ ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ, ತೆಂಗಿನಕಾಯಿ ತುರಿ, ತುಪ್ಪ, ಏಲಕ್ಕಿ ಹಾಕಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ.
ಇದು ತಣ್ಣಗಾದ ಮೇಲೆ ಈ ಹಿಟ್ಟನ್ನು ನಾದಿಕೊಂಡು ಚಿಕ್ಕ ಚಿಕ್ಕ ಉಂಡೆ ರೀತಿ ಕಟ್ಟಿಕೊಳ್ಳಿ. ಗ್ಯಾಸ್ ಮೇಲೆ ಎಣ್ಣೆ ಕಡಾಯಿ ಇಟ್ಟು ಅದು ಕಾದ ಬಳಿಕ ಮಾಡಿಟ್ಟುಕೊಂಡ ಒಂದೊಂದೆ ಉಂಡೆಗಳನ್ನು ಅಂಗೈ ಮೇಲೆ ಇಟ್ಟು ನಿಧಾನಕ್ಕೆ ಒತ್ತಿಕೊಂಡು ಎಣ್ಣೆ ಬಾಣಲೆಗೆ ಬಿಟ್ಟು ಎರಡು ಕಡೆ ಚೆನ್ನಾಗಿ ಕೆಂಪಾಗುವವರೆಗೆ ಕರಿದರೆ ರುಚಿಕರವಾದ ರವಾ ಆಪಂ ಸವಿಯಲು ಸಿದ್ಧ.