ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅನೇಕ ದಿನಗಳಿಂದ ಕ್ರಿಕೆಟ್ ಮೈದಾನಕ್ಕೆ ಇಳಿದಿಲ್ಲ. ಆದ್ರೆ ಮೈದಾನಕ್ಕೆ ಮರಳುವ ಸಿದ್ಧತೆಯನ್ನು ಮಾತ್ರ ನಿರಂತರವಾಗಿ ಮಾಡ್ತಿದ್ದಾರೆ. ಸದ್ಯ ಧೋನಿ ಐಪಿಎಲ್‌ಗೆ ತಯಾರಿ ನಡೆಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ರಾಂಚಿಯಲ್ಲಿ ನೆಟ್ ಪ್ರಾಕ್ಟೀಸ್ ಆರಂಭಿಸಿದ್ದಾರೆ.
ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ನಡೆಯಲಿರುವ ಐಪಿಎಲ್ ಗೆ ತಯಾರಿ ಜೋರಾಗಿದೆ. ಮೈದಾನದಲ್ಲಿ ಧೋನಿ ಅಬ್ಬರ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ಮಧ್ಯೆ ಧೋನಿಯ ಹೆಲಿಕಾಪ್ಟರ್ ಶಾಟ್‌ಗಳನ್ನು ಶೀಘ್ರದಲ್ಲೇ ನೋಡಬಹುದು ಎಂದು ನಿನ್ನೆ ಸುರೇಶ್ ರೈನಾ ಹೇಳಿದ್ದರು.
ಧೋನಿ ಐಪಿಎಲ್ ತಯಾರಿಗಾಗಿ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಘದ ಒಳಾಂಗಣದಲ್ಲಿ ಅಭ್ಯಾಸ ಪ್ರಾರಂಭಿಸಿದ್ದಾರೆ. ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರದಿಂದಾಗಿ ರಾಂಚಿಯಲ್ಲಿ ಪ್ರಸ್ತುತ ಹೆಚ್ಚಿನ ಬೌಲರ್‌ಗಳಿಲ್ಲ. ಆದ್ದರಿಂದ ಧೋನಿ ಬೌಲಿಂಗ್ ಯಂತ್ರದ ಮೂಲಕ ಅಭ್ಯಾಸ ಮಾಡುತ್ತಿದ್ದಾರೆ. ಲಾಕ್ ಡೌನ್ ಗೆ ಮೊದಲೂ ಧೋನಿ ಇಲ್ಲಿ ಐಪಿಎಲ್ ಗಾಗಿ ಅಭ್ಯಾಸ ನಡೆಸಿದ್ದರು.