ಮುಂಬೈನಲ್ಲಿ ಬುಧವಾರದ ಭಾರಿ ಗಾಳಿ ಮಳೆಯ ಭೀಕರತೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿ ಒಂದು ವಿಡಿಯೋ ಆಶ್ಚರ್ಯ ಉಂಟಾಗುವಂತಿದೆ.
ಬಿರುಗಾಳಿಗೆ ತಾಳೆ ಅಥವಾ ಪಾಮ್ ಮರವೊಂದು ಓಲಾಡುವ ವಿಡಿಯೋ ಇದಾಗಿದೆ. ಮರ ಸುಮಾರು 30 ಅಡಿಗೂ ಹೆಚ್ಚು ಅಂತರದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಲಾಡುತ್ತಾ ಇನ್ನೇನು ಈಗ ಬಿದ್ದು ಹೋಗುತ್ತದೆ ಎಂಬಂತೆ ಭಾಸವಾಗುತ್ತದೆ.
ಖ್ಯಾತ ಉದ್ಯಮಿ ಆನಂದ ಮಹೀಂದ್ರ ವಿಡಿಯೋ ಟ್ವೀಟ್ ಮಾಡಿದ್ದು, 72,600 ಜನರು ವೀಕ್ಷಿಸಿದ್ದಾರೆ. 72 ಸಾವಿರಕ್ಕೂ ಅಧಿಕ ಜನ ಇಷ್ಟಪಟ್ಟಿದ್ದಾರೆ.
‘ಮುಂಬೈ ಗಾಳಿ ಮಳೆಯ ಹಲವು ವಿಡಿಯೋಗಳು ಸುತ್ತಾಡುತ್ತಿವೆ. ಆದರೆ, ಅವುಗಳಲ್ಲಿ ಈ ವಿಡಿಯೋ ಅತ್ಯಂತ ನಾಟಕೀಯ (ಡ್ರಾಮೆಟಿಕ್) ಆಗಿದೆ. ಮರವು ಬಿರುಗಾಳಿಗೆ ತಾಂಡವ ನೃತ್ಯ ಮಾಡುತ್ತ ಅದನ್ನು ಆನಂದಿಸುತ್ತಿದೆ’ ಎಂದು ಮಹೀಂದ್ರ ಕ್ಯಾಪ್ಶನ್ ಕೊಟ್ಟಿದ್ದಾರೆ.
ಅದಕ್ಕೆ ಸಾಕಷ್ಟು ಜನ ಪ್ರತಿಕ್ರಿಯೆ ನೀಡಿದ್ದು, ‘ಆಯಾ ಸಾವನ್ ಜೂಮ್ ಕರ್, ಪರ್ ಎಕ್‌ದಮ್ ಮಸ್ತ್ ಗೂಮ್ ಕರ್ ಡಾನ್ಸ್ ಕರ್ ರಹಾ ಹೋ’ (ಮಳೆ ಜುಮ್ಮೆಂದು ಬಂದು ಎಕ್‌ದಮ್ ಸುತ್ತಾಡಿ ನೃತ್ಯ ಮಾಡುತ್ತಿದೆ) ಎಂದು ಕಾವ್ಯಮಯ ಶೈಲಿಯಲ್ಲಿ ಒಬ್ಬರು ಬರೆದಿದ್ದಾರೆ.
https://twitter.com/anandmahindra/status/1291248988725772288?ref_src=twsrc%5Etfw%7Ctwcamp%5Etweetembed%7Ctwterm%5E1291248988725772288%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Faaya-sawan-jhoom-kar-video-of-palm-tree-swaying-due-to-strong-winds-and-rains-in-mumbai-goes-viral-watch%2F632806
https://twitter.com/swilanil/status/1291254276312821761?ref_src=twsrc%5Etfw%7Ctwcamp%5Etweetembed%7Ctwterm%5E1291254276312821761%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Faaya-sawan-jhoom-kar-video-of-palm-tree-swaying-due-to-strong-winds-and-rains-in-mumbai-goes-viral-watch%2F632806