ನವದೆಹಲಿ: ಗ್ರಾಚುಟಿ ಮಿತಿ ಒಂದು ವರ್ಷಕ್ಕೆ ಇಳಿಕೆ ಮಾಡಲಾಗುವುದು ಎಂದು ಹೇಳಲಾಗಿದೆ. ಗ್ರಾಚುಟಿ ಪಾವತಿಗೆ ಐದು ವರ್ಷಗಳ ಸೇವೆ ಕಡ್ಡಾಯ ಎಂಬ ನಿಯಮವನ್ನು ಒಂದು ವರ್ಷಕ್ಕೆ ಇಳಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ, ಬಿಜು ಜನತಾದಳ ಪಕ್ಷದ ಸಂಸದ ಭರ್ತೃಹರಿ ಮೆಹತಾಬ್ ಈ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.
ಬಹುತೇಕ ಜನರು ಅಲ್ಪಾವಧಿಯ ಉದ್ಯೋಗದಲ್ಲಿ ಇರುತ್ತಾರೆ. ಐದು ವರ್ಷಗಳ ನಿರಂತರ ಉದ್ಯೋಗ ಮಾನದಂಡದಿಂದ ಅವರಿಗೆ ಗ್ರಾಚ್ಯುಟಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲ್ಲ. ಹೀಗಾಗಿ ಐದು ವರ್ಷಗಳ ಸೇವೆ ಕಡ್ಡಾಯ ನಿಯಮವನ್ನು ಬದಲಿಸಿ ಒಂದು ವರ್ಷಕ್ಕೆ ಇಳಿಸಬೇಕೆಂದು ಸಲಹೆ ನೀಡಲಾಗಿದೆ.