ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕಳೆದ 26 ದಿನಗಳಿಂದ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ನಟ ಅಮಿತಾಬ್ ಬಚ್ಚನ್ ಈ ಯುದ್ಧವನ್ನು ಗೆದ್ದು ಮನೆಗೆ ವಾಪಸ್ ಆಗಿದ್ದಾರೆ. ಆದ್ರೆ ಜೂನಿಯರ್ ಬಚ್ಚನ್ ಇನ್ನೂ ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊರೊನಾ ಯುದ್ಧದಲ್ಲಿ ಹೋರಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅಭಿಷೇಕ್ ಬಚ್ಚನ್ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡ್ತಿದ್ದಾರೆ. ಈಗ ಬಿಳಿ ಬೋರ್ಡ್ ಒಂದರ ಫೋಟೋ ಹಂಚಿಕೊಂಡಿದ್ದಾರೆ. ಅದ್ರಲ್ಲಿ ಡಯಟ್ ಪ್ಲಾನ್, ನರ್ಸ್ ಹೆಸರು ಹಾಗೂ ಡಿಸ್ಚಾರ್ಜ್ ಬಗ್ಗೆ ಬರೆದಿದೆ.
ಫೋಟೋವನ್ನು ಇನ್ಸ್ಟಾಗ್ರಾಮನಲ್ಲಿ ಪೋಸ್ಟ್ ಮಾಡಿರುವ ಅಭಿಷೇಕ್, ಆಸ್ಪತ್ರೆ ದಿನ: 26. ಡಿಸ್ಚಾರ್ಜ್ ಪ್ಲಾನ್ : ಇಲ್ಲ ಎಂಬ ಶೀರ್ಷಿಕೆಯನ್ನು ಹಾಕಿದ್ದಾರೆ. ತಮ್ಮನ್ನು ತಾವು ಪ್ರೇರೇಪಿಸಿಕೊಳ್ತಾ ಕಮಾನ್ ಬಚ್ಚನ್, ನೀನು ಮಾಡಬಲ್ಲೆ ಎಂದು ಬರೆದುಕೊಂಡಿದ್ದಾರೆ.
https://www.instagram.com/p/CDg5qnGpTMC/?utm_source=ig_embed