alex Certify ಟಿಕ್‌ಟಾಕ್ ಬದಲು ಈ ಆಪ್ ಮೂಲಕ ವಿಡಿಯೋ ಹಂಚಿಕೊಳ್ಳಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕ್‌ಟಾಕ್ ಬದಲು ಈ ಆಪ್ ಮೂಲಕ ವಿಡಿಯೋ ಹಂಚಿಕೊಳ್ಳಿ…!

ಟಿಕ್‌ಟಾಕ್ ಆಪ್‌ ದೇಶಾದ್ಯಂತ ನಿಷೇಧ ಮಾಡಲಾಗಿದೆ. ಈ ಟಿಕ್ ಟಾಕ್ ಆಪ್ ಮೂಲಕ ಅದೆಷ್ಟೋ ಪ್ರತಿಭೆಗಳು ಹೊರ ಬಂದಿದ್ದವು. ಆದರೆ ಇದೀಗ ಚೀನಾದ ನರಿ ಬುದ್ದಿಯಿಂದಾಗಿ ಈ ಆಪ್ ನಿಷೇಧ ಮಾಡಲಾಗಿದೆ. ಆದರೆ ಈ ಆಪ್ ಬದಲು ಇದೀಗ ಹೊಸದೊಂದು ಆಪ್ ಸಾಕಷ್ಟು ಸದ್ದು ಮಾಡುತ್ತಿದೆ.

ಹೌದು, ಟಿಕ್‌ಟಾಕ್ ಬದಲು ರೀಲ್ಸ್ ಎಂಬ ಆಪ್‌ ನೀವು ಬಳಸಬಹುದಾಗಿದೆ. ಇನ್ಸ್ಟಾಗ್ರಾಂ ಅಪ್ಲಿಕೇಶನ್‌ನಲ್ಲಿಯೇ ರೀಲ್ಸ್ ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗಿದೆ. ಈ ರೀಲ್ಸ್ ಮೂಲಕ ಕಿರು ವಿಡಿಯೋಗಳನ್ನು ಬಿಡುಗಡೆ ಮಾಡಬಹುದು. ಇದು ಕೂಡ ಟಿಕ್‌ಟಾಕ್ ರೀತಿಯಲ್ಲಿಯೇ ಇರುವ ವಿಶೇಷ ಆಪ್.

ಇದರ ವೈಶಿಷ್ಯತೆ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಭಾರತ ಸೇರಿದಂತೆ ಸುಮಾರು 50 ದೇಶಗಳಲ್ಲಿ ಈ ರೀಲ್ಸ್ ಪ್ರಾರಂಭ ಮಾಡಲಾಗುತ್ತಿದೆ. ಅದೇನೆ ಇರಲಿ ಟಿಕ್ ಟಾಕ್ ಇಲ್ಲದೇ ಅನೇಕ ಮಂದಿ ಬೇಸರಗೊಂಡಿದ್ದರು. ಆದರೆ ಇದೀಗ ರೀಲ್ಸ್ ಮೂಲಕ ಮತ್ತೊಮ್ಮೆ ನಿಮ್ಮ ಪ್ರತಿಭೆಯನ್ನು ಅನಾವರಣ ಮಾಡಿಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...