ಕೊರೊನಾ ಬಿಕ್ಕಟ್ಟಿನ ಮಧ್ಯೆ ಹಣ ಸಂಪಾದಿಸಲು ಕೆಲ ಕಂಪನಿಗಳು ಮೋಸದ ದಾರಿ ಹಿಡಿದಿವೆ. ಆರೋಗ್ಯ ಹಾಳು ಮಾಡುವ ಸ್ಯಾನಿಟೈಜರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ್ತಿವೆ. ಹಾಗಾಗಿ ಸ್ಯಾನಿಟೈಜರ್ ಖರೀದಿ ಮಾಡುವ ವೇಳೆ ಬ್ರಾಂಡ್ ಬಗ್ಗೆ ಖಚಿತಪಡಿಸಿಕೊಳ್ಳಿ.
ಹರಿಯಾಣ ಆರೋಗ್ಯ ಮತ್ತು ಗೃಹ ಸಚಿವಾಲಯ ರಾಜ್ಯದಲ್ಲಿ 11 ಸ್ಯಾನಿಟೈಜರ್ ಬ್ರಾಂಡ್ ವಿರುದ್ಧ ಎಫ್ಐಆರ್ ದಾಖಲಿಸಿದೆ. ಪರವಾನಗಿ ರದ್ದುಗೊಳಿಸಲು ಸೂಚನೆ ನೀಡಲಾಗಿದೆ. ಹರಿಯಾಣದ ಆಹಾರ ಮತ್ತು ಔಷಧ ಆಡಳಿತ ಮಂಡಳಿಯು 248 ಮಾದರಿಗಳನ್ನು ಸಂಗ್ರಹಿಸಿದೆ. ಅದರಲ್ಲಿ 123 ವರದಿಗಳು ಬಂದಿವೆ. 5 ಸ್ಯಾನಿಟೈಜರ್ ನಲ್ಲಿ ಮೆಥನಾಲ್ ಪ್ರಮಾಣ ಅಧಿಕವಾಗಿದೆ. ಇದು ವಿಷಕಾರಿಯಾಗಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮೆಥನಾಲ್ ಹೆಚ್ಚು ಅಪಾಯಕಾರಿ. ಮಾರ್ಚ್ ನಲ್ಲಿ ಇರಾನ್ ನಲ್ಲಿ ಮೆಥನಾಲ್ ಕುಡಿದು 300 ಜನರು ಸಾವನ್ನಪ್ಪಿದ್ದರು. ಸ್ಯಾನಿಟೈಜರ್ ಗೆ ಈಗ ಬೇಡಿಕೆ ಹೆಚ್ಚಿದೆ. ಇದೇ ಕಾರಣಕ್ಕೆ ಸ್ಥಳೀಯ ಸ್ಯಾನಿಟೈಜರ್ ತಯಾರಕರ ಸಂಖ್ಯೆ ಹೆಚ್ಚಿದೆ. ಕೆಲವರು ಹಣದಾಸೆಗೆ ಹೆಚ್ಚಿನ ಮೆಥನಾಲ್ ಹಾಕ್ತಿದ್ದಾರೆ.