ವಿಶ್ವದಲ್ಲಿ ಕೊರೊನಾ ವೈರಸ್ನಿಂದ ಸಾವನ್ನಪ್ಪಿದವರ ಸಂಖ್ಯೆ ಬುಧವಾರ 7 ಲಕ್ಷ ದಾಟಿದೆ. ಪ್ರಪಂಚದಲ್ಲಿ ಪ್ರತಿ 15 ಸೆಕೆಂಡಿಗೆ ಸರಾಸರಿ ಒಬ್ಬ ವ್ಯಕ್ತಿಯು ಕೊರೊನಾ ವೈರಸ್ನಿಂದ ಸಾಯುತ್ತಿದ್ದಾನೆ. ಕಳೆದ 2 ವಾರಗಳ ಮಾಹಿತಿಯ ಆಧಾರದ ಮೇಲೆ, ಸುದ್ದಿ ಸಂಸ್ಥೆ ರಾಯಿಟರ್ಸ್ ಈ ವಿಶ್ಲೇಷಣೆಯನ್ನು ಬಿಡುಗಡೆ ಮಾಡಿದೆ.
ಅಮೆರಿಕ, ಬ್ರೆಜಿಲ್, ಭಾರತ ಮತ್ತು ಮೆಕ್ಸಿಕೊ ದೇಶಗಳಲ್ಲಿ ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ವಿಶ್ವದ ಪ್ರತಿ 24 ಗಂಟೆಗಳಿಗೊಮ್ಮೆ 5900 ಜನರು ಕೊರೊನಾದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಒಂದು ಗಂಟೆಗೆ 247 ಮಂದಿ ಹಾಗೂ ಪ್ರತಿ 15 ಸೆಕೆಂಡಿಗೆ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಿದ್ದಾನೆ. ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕ ಕೊರೊನಾ ವೈರಸ್ನ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ.