ದಾಂಪತ್ಯ ಹಾಗೂ ಶಾರೀರಿಕ ಸಂಬಂಧ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ದೈಹಿಕ ಸಂಬಂಧ ಹದಗೆಟ್ಟರೆ ಅದರ ನೇರ ಪರಿಣಾಮ ದಾಂಪತ್ಯದ ಮೇಲಾಗುತ್ತದೆ. ಮದುವೆ ಮುರಿದು ಬೀಳಲು ಸೆಕ್ಸ್ ಒಂದು ಬಹುದೊಡ್ಡ ಕಾರಣ.
ಸೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಅನೇಕ ಸಂಶೋಧನೆಗಳು ನಡೆಯುತ್ತಿರುತ್ತವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವೆಬ್ಸೈಟೊಂದು ಅಧ್ಯಯನ ನಡೆಸಿದೆ. ಇದ್ರಲ್ಲಿ ವಿಶ್ವದ ಅನೇಕ ಮಂದಿ ಪಾಲ್ಗೊಂಡಿದ್ದರು. ಮದುವೆ ಮುರಿದು ಬೀಳಲು ಹಾಗೂ ಸಂಗಾತಿ ಬೇರೆ ಸಂಬಂಧವನ್ನರಸಿ ಹೋಗಲು ಪ್ರಮುಖ ಕಾರಣ ಸೆಕ್ಸ್ ಲೈಫ್ ನಲ್ಲುಂಟಾದ ಗೊಂದಲ ಎಂಬುದು ಅಧ್ಯಯನದಿಂದ ಗೊತ್ತಾಗಿದೆ.
ಮುಟ್ಟು ನಿಂತ ಮೇಲೂ ಸಹಜವಾಗಿ ‘ಗರ್ಭ’ ಧರಿಸಬಹುದು ಮಹಿಳೆ
ಮದುವೆ ನಂತ್ರ ಸಂಗಾತಿಗೆ ಮೋಸ ಮಾಡಿರುವುದಾಗಿ ಶೇಕಡಾ 60 ರಷ್ಟು ಪುರುಷರು ಹಾಗೂ ಶೇ.45ರಷ್ಟು ಮಹಿಳೆಯರು ಒಪ್ಪಿಕೊಂಡಿದ್ದಾರೆ. ಸೆಕ್ಸ್ ವಿಚಾರದಲ್ಲಿ ಅವರಿಗೆ ಆಸಕ್ತಿ ಇದೆ. ಇದನ್ನೇ ಅವರು ಸಂಗಾತಿಯಿಂದಲೂ ಬಯಸ್ತಾರಂತೆ. ಆದ್ರೆ ಅದು ಈಡೇರದೆ ಹೋದಲ್ಲಿ ಬೇರೆ ಮಾರ್ಗ ಹುಡುಕಿಕೊಳ್ಳುವುದಾಗಿ ತಿಳಿಸಿದ್ದಾರೆ. ಪತ್ನಿ ಜೊತೆ ಕೇವಲ ರೂಮ್ ಮೆಂಟ್ ರೀತಿಯಲ್ಲಿ ವಾಸವಾಗಿದ್ದು, ಪ್ರೀತಿ ಸಂಪೂರ್ಣವಾಗಿ ಸತ್ತು ಹೋಗಿದೆ ಎಂದು ವ್ಯಕ್ತಿಯೊಬ್ಬ ಹೇಳಿದ್ದಾನೆ. ಸೆಕ್ಸ್ ಪ್ರೀತಿ ತೋರ್ಪಡಿಸುವ ಒಂದು ಭಾಗ. ಇದು ಕಡಿಮೆಯಾದಂತೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನ ಹೇಳಿದೆ.