ಚಿನ್ನ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಇಂದು ಬುಲಿಯನ್ ಮಾರುಕಟ್ಟೆಯ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆ ದಾಖಲಿಸಿದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ದೇಶೀಯ ಷೇರು ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳ ಕುಸಿತ ಇದಕ್ಕೆ ಕಾರಣ ಎನ್ನಲಾಗಿದೆ.
ಮಂಗಳವಾರ, ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಶೇಕಡಾ 99.9ರಷ್ಟು ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 54,733 ರೂಪಾಯಿಗಳಿಂದ 54,830 ರೂಪಾಯಿಯಾಗಿದೆ. ಇಂದು ಚಿನ್ನದ ಬೆಲೆ 97 ರೂಪಾಯಿ ಏರಿಕೆ ಕಂಡಿದೆ. ಮುಂಬೈನಲ್ಲಿ ಶೇಕಡಾ 99.9 ರಷ್ಟು ಶುದ್ಧ ಚಿನ್ನದ ಬೆಲೆ ಹತ್ತು ಗ್ರಾಂಗೆ 53996 ರೂಪಾಯಿಯಾಗಿದೆ.
ಮಂಗಳವಾರ ಬೆಳ್ಳಿಯ ಬೆಲೆ ಕುಸಿದಿದೆ. ದೆಹಲಿಯಲ್ಲಿ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ 66,860 ರೂಪಾಯಿಗಳಿಂದ 66,855 ರೂಪಾಯಿಯಾಗಿದೆ. ಇಂದು ಬೆಳ್ಳಿ ಬೆಲೆ ಕೇವಲ 5 ರೂಪಾಯಿ ಕುಸಿತ ಕಂಡಿದೆ.