ಐಪಿಎಲ್ ಸರಣಿಗೆ ದಿನಗಣನೆ ಶುರುವಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಆಟಗಾರರು ಮುಂಬೈಗೆ ಬರಲು ಶುರು ಮಾಡಿದ್ದಾರೆ. ಕೆಲ ಆಟಗಾರರು ಈಗಾಗಲೇ ಮುಂಬೈಗೆ ಬಂದಿದ್ರೆ ಮತ್ತೆ ಕೆಲವರು ಮುಂದಿನ ವಾರದಲ್ಲಿ ಬರುತ್ತಾರೆ.
ಮುಂಬೈಗೆ ಬರುವ ಆಟಗಾರರಿಗೆ ಕೊರೊನಾ ಬರದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಜಾರಿಗೆ ತರಲಾಗಿದೆ. ಮುಂಬೈಗೆ ಬರುವ ಸ್ಥಳೀಯ ಆಟಗಾರರಿಗೆ 14 ದಿನಗಳ ಕ್ವಾರಂಟೈನ್ ವಿಧಿಸಲಾಗಿದೆ.
ಕ್ವಾರಂಟೈನ್ ಮುಗಿದ ತಕ್ಷಣ ಅವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಟೀಂ ಇಂಡಿಯಾ ಆಟಗಾರರು ಕೂಡ ಈ ನಿಯಮ ಪಾಲನೆ ಮಾಡಬೇಕೆಂದು ಮುಂಬೈ ತಂಡದ ಅಧಿಕಾರಿಗಳು ಹೇಳಿದ್ದಾರೆ. ಕ್ವಾರಂಟೈನ್ ಮುಗಿದ ನಂತ್ರ ಮೈದಾನದಲ್ಲಿ ತರಬೇತಿ ಶುರುವಾಗಲಿದೆ. ಯುಎಇಗೆ ಹೋಗುವ ಮೊದಲು ಮುಂಬೈ ತಂಡದ ಆಟಗಾರರಿಗೆ ಐದು ಬಾರಿ ಕೊರೊನಾ ಪರೀಕ್ಷೆ ನಡೆಯಲಿದೆ. ಮುಂಬೈಗೆ ಬರುವ ಮೊದಲು ಆಟಗಾರರು ತಮ್ಮೂರಿನಲ್ಲಿ ಎರಡು ಬಾರಿ ಪರೀಕ್ಷೆ ಮಾಡಿಸಬೇಕು. ಮುಂಬೈಗೆ ಬಂದ್ಮೇಲೆ ಮೂರು ಪರೀಕ್ಷೆ ನಡೆಯಲಿದೆ.