ಲಾಕ್‌ಡೌನ್‌ನಿಂದಾಗಿ ಆಟೋ ಉದ್ಯಮಗಳು ಹದಗೆಟ್ಟಿದ್ದು, ಪರಿಸ್ಥಿತಿ ಸುಧಾರಿಸಲು ಆಟೋ ಕಂಪನಿಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಮಾರಾಟವನ್ನು ಹೆಚ್ಚಿಸಲು ಕಂಪನಿಗಳು ಅನೇಕ ಆಫರ್ ನೀಡುತ್ತಿವೆ. ಈ ಮಧ್ಯೆ ಹೀರೋ ಎಲೆಕ್ಟ್ರಿಕ್ ಗ್ರಾಹಕರಿಗೆ ಉತ್ತಮ ಆಫರ್ ನೀಡ್ತಿದೆ. ಹೊಸ ಚಂದಾದಾರಿಕೆ ಯೋಜನೆಯಡಿ ಹೀರೋ ಸ್ಕೂಟರನ್ನು ಕೇವಲ 2,999 ರೂಪಾಯಿಗಳಿಗೆ ಮನೆಗೆ ತರಬಹುದಾಗಿದೆ.
ಹೀರೋ ಎಲೆಕ್ಟ್ರಿಕ್ ಬೆಂಗಳೂರಿನ ಆಟೊವರ್ಟ್ ಟೆಕ್ನಾಲಜಿಯೊಂದಿಗೆ ಪಾಲುದಾರಿಕೆ ಹೊಂದಿದೆ. ಕಂಪನಿಯ 2,999 ರೂಪಾಯಿಗೆ ಎಲೆಕ್ಟ್ರಿಕ್ ಸ್ಕೂಟರ್ ವಿಮೆ, ಸರ್ವಿಸ್ ಮತ್ತು ಮೆಂಟೇನೆನ್ಸ್, ಲಾಯಲ್ಟಿ ಬೋನಸ್ ಮತ್ತು ಅಪ್‌ಗ್ರೇಡ್ ಆಯ್ಕೆಗಳನ್ನು ನೀಡುತ್ತದೆ.
ರಕ್ಷಾ ಬಂಧನದ ಸಂದರ್ಭದಲ್ಲಿ ಹೀರೋ ಎಲೆಕ್ಟ್ರಿಕ್ ‘ರಾಖಿ ಸ್ಪೆಷಲ್’ ಆಫರ್ ನೀಡ್ತಿದೆ. ಈ ಆಫರ್ ನಲ್ಲಿ ಹೀರೋ ಎಲೆಕ್ಟ್ರಿಕ್ ಸ್ಕೂಟರನ್ನು 2,999 ರೂಪಾಯಿಗಳಿಗೆ ಬುಕ್ ಮಾಡಲು ಅವಕಾಶ ನೀಡ್ತಿದೆ. ಸ್ಕೂಟರನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಿದರೆ ಮೂರು ಸಾವಿರ ರೂಪಾಯಿಗಳ ರಿಯಾಯಿತಿ ಕೂಡ ಸಿಗುತ್ತದೆ.