ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯ ಶುರುವಾಗ್ತಿದೆ. ಬಿಸಿಸಿಐಗೆ ಭಾರತ ಸರ್ಕಾರದ ಅನುಮೋದನೆ ದೊರೆತಿದೆ. ಭಾನುವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಐಪಿಎಲ್‌ಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಗೆ ದೊಡ್ಡ ಹೊಡೆತ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಾಸ್ತವವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ 30 ವರ್ಷ ಮೇಲ್ಪಟ್ಟ ಆಟಗಾರರ ಸಂಖ್ಯೆ ಉಳಿದ ತಂಡಕ್ಕಿಂತ ಹೆಚ್ಚಿದೆ. ಹಾಗಾಗಿ ಆಟಗಾರರಿಗೆ ಹೆಚ್ಚಿನ ಪ್ರ್ಯಾಕ್ಟೀಸ್ ಅಗತ್ಯವಿದೆ. ಎಂ.ಎಸ್.ಧೋನಿ, ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಸುಮಾರು ಒಂದು ವರ್ಷದಿಂದ ಕ್ರಿಕೆಟ್ ಮೈದಾನಕ್ಕೆ ಇಳಿದಿಲ್ಲ. ಹಾಗಾಗಿ ತಂಡದ ಸದಸ್ಯರು ಆಗಸ್ಟ್ 10ರ ವೇಳೆಗೆ ಯುಎಇ ತಲುಪಿ ಅಭ್ಯಾಸ ಶುರು ಮಾಡಲು ಮುಂದಾಗಿದ್ದರು.
ವರದಿ ಪ್ರಕಾರ, ಎಲ್ಲಾ ಫ್ರಾಂಚೈಸಿಗಳಿಗೆ ಬಿಸಿಸಿಐ ಈ ಬಗ್ಗೆ ಸೂಚನೆ ನೀಡಿದೆ. ತಂಡಗಳು ಆಗಸ್ಟ್ ಎರಡನೇ ಅಥವಾ ಮೂರನೇ ವಾರದಲ್ಲಿ ಯುಎಇಗೆ ತೆರಳಲು ಯೋಜಿಸಿದೆ. ಆಗಸ್ಟ್ 20 ರ ಮೊದಲು ಯಾವುದೇ ತಂಡ ಯುಎಇಗೆ ಹೋಗಬಾರದು ಎಂದು ಬಿಸಿಸಿಐ ಹೇಳಿದೆ.