
ಪೂರ್ವ ಏಷ್ಯಾದ ದೇಶವಾದ ಕಾಂಬೋಡಿಯಾದಲ್ಲಿ ಕಾನೂನೊಂದು ಜಾರಿಗೆ ಬರಲಿದೆ. ಹುಡುಗಿಯರು ಶಾರ್ಟ್ ಸ್ಕರ್ಟ್ ಧರಿಸುವುದು ಹಾಗೂ ಪುರುಷರು ಶರ್ಟ್ ಲೆಸ್ ಆಗುವುದನ್ನು ನಿಷೇಧಿಸಲಾಗ್ತಿದೆ. ಒಂದು ವೇಳೆ ಈ ಕಾನೂನು ಜಾರಿಗೆ ಬಂದ್ರೆ ಪೊಲೀಸರು ಶಾರ್ಟ್ ಸ್ಕರ್ಟ್ ಹಾಗೂ ಶರ್ಟ್ ಲೆಸ್ ಆದವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ.
ಈ ಉಡುಗೆಗಳು ದೇಶದಲ್ಲಿ ಕ್ರೈಂ ಜಾಸ್ತಿ ಮಾಡ್ತಿದೆ. ಹಾಗೆ ಇದು ಕಾಂಬೋಡಿಯಾ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಸ್ತಾಪಕ್ಕೆ ಕಾಂಬೋಡಿಯನ್ ಸರ್ಕಾರದ ಸಚಿವಾಲಯಗಳು ಮತ್ತು ರಾಷ್ಟ್ರೀಯ ಸಂಸತ್ತಿನಿಂದ ಅನುಮೋದನೆ ದೊರೆತರೆ. ಇದನ್ನು 2021 ರ ಆರಂಭದಿಂದ ಜಾರಿಗೆ ತರಲಾಗುವುದು.
ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳಗಳಲ್ಲಿ ಶರ್ಟ್ಲೆಸ್ ಆಗಿ ಕಾಣಿಸಿಕೊಂಡರೆ ಅಥವಾ ಸಣ್ಣ ಸ್ಕರ್ಟ್ನಲ್ಲಿ ಮಹಿಳೆ / ಹುಡುಗಿ ಕಾಣಿಸಿಕೊಂಡರೆ, ಅವರಿಗೆ ದಂಡ ವಿಧಿಸಲಾಗುತ್ತದೆ. ಆದ್ರೆ ಸರ್ಕಾರದ ಈ ನಿರ್ಧಾರವನ್ನು ಅನೇಕರು ಖಂಡಿಸಿದ್ದಾರೆ.