
ಧಾರವಾಡ ತಾಲ್ಲೂಕಿನ ಬೋಗೂರಿನಲ್ಲಿ ಅತ್ಯಾಚಾರದಿಂದ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿಂಗನಹಳ್ಳಿ ಬಶೀರ್ ಮಾಬು ಸಾಬ್(24) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ.
ಜುಲೈ 30 ರಂದು 15 ವರ್ಷದ ಬಾಲಕಿ ತಂದೆಯೊಂದಿಗೆ ಹೊಲಕ್ಕೆ ಹೋಗಿದ್ದಾಳೆ. ಹೊಲದ ಸಮೀಪದ ದೇವಾಲಯದ ಬಳಿಗೆ ಆಕೆಯನ್ನು ಕರೆದೊಯ್ದು ಆರೋಪಿ ಅತ್ಯಾಚಾರ ಎಸೆಗಿದ್ದಾನೆ. ಬಗ್ಗೆ ಮಾಹಿತಿ ತಿಳಿದ ಪೋಷಕರು ಬೇಸರಗೊಂಡು ಬಾಲಕಿಯನ್ನು ಸಮಾಧಾನಪಡಿಸಿದ್ದಾರೆ.
ಆದರೆ ಅತ್ಯಾಚಾರ ಘಟನೆ ನಂತರ ಖಿನ್ನತೆಗೆ ಒಳಗಾಗಿದ್ದ ಬಾಲಕಿ ಕ್ರಿಮಿನಾಶಕ ಸೇವಿಸಿದ್ದು ತೀವ್ರ ಅಸ್ವಸ್ಥಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.