ಅಲೋಪೇಸಿಯಾದಿಂದ ಬಳಲುತ್ತಿರುವ ತನ್ನ ಗೆಳತಿಗೆ ಮಾನಸಿಕ ಬೆಂಬಲ ನೀಡಲೆಂದು ಯುವಕನೊಬ್ಬ ತನ್ನ ತಲೆಯನ್ನೂ ಶೇವ್ ಮಾಡಿಕೊಂಡ ಘಟನೆ ತಿಳಿದು ನೆಟ್ಟಿಗ ಸಮುದಾಯ ಬೆರಗಾಗಿದೆ.
ದಶಕಕ್ಕಿಂತ ಹೆಚ್ಚಿನ ಅವಧಿಯಿಂದ ತಲೆಗೂದಲನ್ನು ಉದ್ದುದ್ದ ಬೆಳೆಯಲು ಬಿಡುತ್ತಾ ಬಂದಿರುವ ಎವಾ ಬಾರಿಲಾರೋ, ಅಲೋಪೇಸಿಯಾದ ಕಾರಣ ತಮ್ಮ ಕೂದಲು ಉದುರುತ್ತಿದ್ದರಿಂದ, ಅವನ್ನೆಲ್ಲಾ ಶೇವ್ ಮಾಡಲು ತನ್ನ ಬಾಯ್ಫ್ರೆಂಡ್ ಡೇಮಿಯನ್ಗೆ ಸೂಚಿಸಿದ್ದಾರೆ. ಕೂದಲು ವಿಪರೀತ ಉದುರುವುದನ್ನು ಅಲೋಪೇಸಿಯಾ ಎನ್ನುತ್ತಾರೆ.
ತನ್ನ ಗೆಳತಿಯ ವೇದನೆಯನ್ನು ತಾನೂ ಹಂಚಿಕೊಳ್ಳಲು ಮುಂದಾದ ಡೇಮಿಯನ್ ಖುದ್ದು ತನ್ನ ಕೂದಲನ್ನೂ ಬೋಳಿಸಿಕೊಂಡಿದ್ದಾರೆ. ಈ ಟಚಿಂಗ್ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಶೇರ್ ಮಾಡಲಾಗಿದೆ.