ಈ ಲಿಂಗ ಸಮಾನತೆ ಎನ್ನುವುದು ಅತ್ಯಂತ ಹೆಚ್ಚಾಗಿಯೇ ಚರ್ಚಿಸಲ್ಪಟ್ಟು, ಈ ವಿಚಾರದಲ್ಲಿ ರಾಜಕೀಯವೂ ಬೆರೆತಿದೆ ಎನಿಸುತ್ತದೆ.
ರಸ್ತೆ ದಾಟುವ ವೇಳೆ ಸಂಚಾರಿ ಸಿಗ್ನಲ್ ದೀಪಗಳಲ್ಲಿ ಸಾಂಕೇತಿಕವಾಗಿ ನೀಡಲಾಗುವ ಚಿತ್ರಗಳು ಪುರುಷರದ್ದಾಗಿರುವ ಕಾರಣ, ಅಲ್ಲೂ ಸಹ ಲಿಂಗ ಸಮಾನತೆ ತಂದು ಸ್ತ್ರೀಯರ ಚಿತ್ರಗಳನ್ನು ಹಾಕಬೇಕೆಂದು, ಮುಂಬೈನ ದಾದರ್ನಲ್ಲಿ ಹೀಗೆ ಮಾಡಲಾಗಿದೆ. ಇಲ್ಲಿನ ಸಿಗ್ನಲ್ಗಳಲ್ಲಿರುವ ದೀಪಗಳಲ್ಲಿ ಸ್ತ್ರೀಯ ಚಿತ್ರವನ್ನು ಇಡಲಾಗಿದೆ.
ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ನಡೆಯನ್ನು ಶ್ಲಾಘಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕರೆ ಪುತ್ರ ಆದಿತ್ಯ ಠಾಕರೆ, ಟ್ವೀಟರ್ಲ್ಲಿ ಸಿಗ್ನಲ್ನ ಚಿತ್ರಗಳನ್ನು ಹಾಕಿದ್ದು, “ನೀವೇನಾದರೂ ದಾದರ್ ದಾಟಿಕೊಂಡು ಹೋದಲ್ಲಿ, ನಿಮಗೆ ಹೆಮ್ಮೆ ತರುವಂಥ ದೃಶ್ಯವೊಂದನ್ನು ನೋಡಲಿದ್ದೀರಿ, ಬಹಳ ಸಿಂಪಲ್ ಐಡಿಯಾವೊಂದರ ಮೂಲಕ @mybmcWardGN ಲಿಂಗ ಸಮಾನತೆಯನ್ನು ಖಾತ್ರಿಪಡಿಸುತ್ತಿದೆ,” ಎಂದು ಹೇಳಿಕೊಂಡಿದ್ದಾರೆ.